ಹೊಸದಿಲ್ಲಿ: ದೇಶದ ರಫ್ತು ವಹಿವಾಟು ಕಳೆದ ಮೇ 1-21 ರ ಅವಧಿಯಲ್ಲಿ 23.7 ಶತಕೋಟಿ ಡಾಲರ್‌ಗೆ (ಅಂದಾಜು 1.82 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಫ್ತಿನಲ್ಲಿ ಆರೋಗ್ಯಕರ ಚೇತರಿಕೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 15-21ರ ಅವಧಿಯಲ್ಲಿ ರಫ್ತು 8.03 ಶತಕೋಟಿ ಡಾಲರ್ ವೃದ್ಧಿಸಿತ್ತು. ಮೇ 1-21ರ ನಡುವೆ ಪೆಟ್ರೋಲಿಯಂ ಉತ್ಪನ್ನಗಳು, ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ರಫ್ತಿನಲ್ಲಿ ಅನುಕ್ರಮವಾಗಿ ಶೇ.81, ಶೇ.17 ಮತ್ತು ಶೇ.44 ರಷ್ಟು ಏರಿಕೆಯಾಗಿತ್ತು. ವಾಣಿಜ್ಯ ಸಚಿವಾಲಯ ಜೂನ್‌ನಲ್ಲಿ ಇಡೀ ತಿಂಗಳಿನ ಸಮಗ್ರ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಿದೆ.
ಕಳೆದ ಏಪ್ರಿಲ್‌ನಲ್ಲಿ ರಫ್ತು ಶೇ.30ರಷ್ಟು ವೃದ್ಧಿಸಿತ್ತು. (40.19 ಶತಕೋಟಿ ಡಾಲರ್) ಆಮದು ಕೂಡ ಶೇ.30 ವೃದ್ಧಿಸಿತ್ತು ( 60 ಶತಕೋಟಿ ಡಾಲರ್)
ಭಾರತವು 2021-22ರ ಸಾಲಿನಲ್ಲಿ ದಾಖಲೆಯ 421 ಶತಕೋಟಿ ಡಾಲರ್ ರಫ್ತು ನಡೆಸಿತ್ತು. (ಅಂದಾಜು 32 ಲಕ್ಷ ಕೋಟಿ ರೂ.) 2030ರ ವೇಳೆಗೆ ರಫ್ತು 1 ಲಕ್ಷ ಕೋಟಿ ಡಾಲರ್‌ಗೆ (ಅಂದಾಜು 77 ಲಕ್ಷ ಕೋಟಿ ರೂ.) ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರು ತಿಳಿಸಿದ್ದಾರೆ.
ಪಿಎಂ ಗತಿಶಕ್ತಿಯಂಥ ಯೋಜನೆಗಳ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು ರಫ್ತನ್ನು ಗಣನೀಯ ವೃದ್ಧಿಸಲಾಗುವುದು ಎಂದರು.
ಇದನ್ನೂ ಓದಿ: ರಫ್ತು ಸೂಚ್ಯಂಕದಲ್ಲಿ ಆರು ಸ್ಥಾನ ಜಿಗಿದ ಕರ್ನಾಟಕ