ನವದೆಹಲಿ: ದೇಶದಲ್ಲಿ ಮುಂಬರುವ ಆಗಸ್ಟ್-ಸೆಪ್ಟೆಂಬರ್ ವೇಳೆಗೆ 5G ಸೇವೆಯನ್ನು ಆರಂಭಿಸಲಾಗುವುದು. ವರ್ಷಾಂತ್ಯದೊಳಗೆ 20-25 ನಗರಗಳಲ್ಲಿ 5G ವಿಸ್ತರಣೆಯಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸರ್ಕಾರ 4G ಮತ್ತು 5G ಉತ್ಪನ್ನಗಳಿಗೆ ಆದ್ಯತೆ ನೀಡಲಿದೆ. ದೇಶದಲ್ಲಿಯೇ ಈ ಕುರಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಈಗಲೂ ದೇಶದಲ್ಲಿ ಡೇಟಾ ದರ ವಿಶ್ವದಲ್ಲಿಯೇ ಅಗ್ಗವಾಗಿದೆ. ಜಾಗತಿಕ ಸರಾಸರಿ 25 ಡಾಲರ್ ಇದ್ದರೆ, ಭಾರತದಲ್ಲಿ ಸರಾಸರಿ 2 ಡಾಲರ್ ಇದೆ. ಸರಕಾರ 4.3 ಲಕ್ಷ ಕೋಟಿ ರೂ. ಮೌಲ್ಯದ ಸ್ಪೆಕ್ಟ್ರಮ್ ಅನ್ನು ಹರಾಜು ಮಾಡುತ್ತಿದೆ. ಇದರಿಂದ ಅಲ್ಟ್ರಾ ಹೈ ಸ್ಪೀಡ್ ಇಂಟರ್‌ನೆಟ್ ಒಳಗೊಂಡಂತೆ 5G ಟೆಲಿಕಾಂ ಸೇವೆಯನ್ನು ಕಲ್ಪಿಸಲಾಗುವುದು. ಹಾಗೂ ಇದು ಕ್ರಾಂತಿಕಾರಕ ಪರಿವರ್ತನೆ ತರಲಿದೆ ಎಂದರು.
ಇದನ್ನೂ ಓದಿ: ವಿಸ್ತಾರ Explainer: ಇಂಟರ್‌ನೆಟ್ ಮಾತ್ರವಲ್ಲ, ದೇಶದ ಎಕಾನಮಿ ಸ್ಪೀಡನ್ನೂ ಹೆಚ್ಚಿಸಲಿದೆ 5G!