ನವದೆಹಲಿ: ಎಂಜಿನಿಯರಿಂಗ್ ಸರಕುಗಳು, ಜ್ಯುವೆಲ್ಲರಿ, ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಕಳೆದ ಜೂನ್ 1-7ರ ಅವಧಿಯಲ್ಲಿ 24.18% ಏರಿಕೆಯಾಗಿದೆ. ರಫ್ತು ಮೌಲ್ಯ 9.4 ಶತಕೋಟಿ ಡಾಲರ್ ಗೆ (72,380 ಕೋಟಿ ರೂ.) ವೃದ್ಧಿಸಿದೆ. ಇದೇ ವೇಳೆ ಆಮದು ಕೂಡ 76.9% ಏರಿಕೆಯಾಗಿದ್ದು, ( 16 ಶತಕೋಟಿ ಡಾಲರ್-1.23 ಲಕ್ಷ ಕೋಟಿ ರೂ.) ವ್ಯಾಪಾರ ಕೊರತೆ 6.6 ಶತಕೋಟಿ ಡಾಲರ್ ಗೆ (50,820 ಕೋಟಿ ರೂ.) ಹೆಚ್ಚಳವಾಗಿದೆ.
ಪೆಟ್ರೋಲಿಯಂ ಹೊರತಾದ ಉತ್ಪನ್ನಗಳ ರಫ್ತು 80% ಹೆಚ್ಚಳವಾಗಿದೆ. ಪೆಟ್ರೋಲಿಯಂ ಹೊರತಾದ ವಸ್ತುಗಳ ಆಮದು 80% ಹೆಚ್ಚಿದೆ. (ಕಲ್ಲಿದ್ದಲು ಮತ್ತು ಬಂಗಾರ) ಭಾರತದ ಸರಕುಗಳ ರಫ್ತು 15.46 ಏರಿಕೆಯಾಗಿದ್ದು, 37.29 ಶತಕೋಟಿ ಡಾಲರ್‌ಗೆ (2.87 ಲಕ್ಷ ಕೋಟಿ ರೂ.) ವೃದ್ಧಿಸಿದೆ.
ಎಂಜಿನಿಯರಿಂಗ್, ಜ್ಯುವೆಲ್ಲರಿ, ಎಲೆಕ್ಟ್ರಾನಿಕ್ ಸರಕುಗಳ ರಫ್ತಿನಲ್ಲಿ ಹೆಚ್ಚಳವಾಗಿದೆ. ಹೀಗಿದ್ದರೂ ಪ್ಲಾಸ್ಟಿಕ್ ರಫ್ತು ತಗ್ಗಿದೆ. ಪೆಟ್ರೋಲಿಯಂ, ಕಲ್ಲಿದ್ದಲು, ಬಂಗಾರದ ಆಮದು ವೃದ್ಧಿಸಿದೆ. ಬಂಗಾರದ ಆಮದು ಜೂನ್ ಮೊದಲ ವಾರ 391% ಹೆಚ್ಚಳವಾಗಿತ್ತು. ಕಲ್ಲಿದ್ದಲು ಆಮದು 207% ಹೆಚ್ಚಳವಾಗಿತ್ತು.