ಆದಾಯ ತೆರಿಗೆ ವಿವರ ಸಲ್ಲಿಕೆಗೆ (Income Tax Return) ಸಲ್ಲಿಕೆಗೆ 2023ರ ಜುಲೈ 31 ಕೊನೆಯ ದಿನ. ನೀವು ಕೊಡಬೇಕಾಗಿರುವುದಕ್ಕಿಂತ ಹೆಚ್ಚು ತೆರಿಗೆ ಮೊತ್ತವನ್ನು ನೀಡಿದ್ದರೆ ಇಲಾಖೆ ಅದನ್ನು ರಿಫಂಡ್ ಮಾಡುತ್ತದೆ. ಆದ್ದರಿಂದ ನಿಮ್ಮ ಐಟಿಆರ್ ಅನ್ನು ಸಲ್ಲಿಸುವುದು ಬಹಳ ಮುಖ್ಯ. ಅದರಲ್ಲಿ ನಿಮ್ಮ ಹೂಡಿಕೆ, ಲಾಯಬಿಲಿಟೀಸ್ ಮತ್ತು ಆದಾಯದ ವಿವರಗಳನ್ನು ನೀಡಬೇಕು. ಐಟಿಆರ್ ಸಲ್ಲಿಕೆ ನಿಮ್ಮ ಆರ್ಥಿಕತೆಗೆ ಒಂದು ಶಿಸ್ತನ್ನು ನೀಡುತ್ತದೆ.
ಇದನ್ನೂ ಓದಿ: Stock trading : ಸ್ಟಾಕ್ ಟ್ರೇಡಿಂಗ್ ಎಷ್ಟು ಸೇಫ್? ಎಷ್ಟು ರಿಸ್ಕ್? ವೀಕ್ಷಿಸಿ ವಿಸ್ತಾರ ಮನಿ ಪ್ಲಸ್
ಆದಾಯ ತೆರಿಗೆ ವಿವರವನ್ನು ಸಲ್ಲಿಸುವ ಸಂದರ್ಭ ಹೆಚ್ಚು ತೆರಿಗೆ ರಿಫಂಡ್ ಪಡೆಯಲು ಯತ್ನಿಸಬೇಕು. ಫಾರ್ಮ್ 16 ಮಾತ್ರ ನಿಮ್ಮ ಸಂಭವನೀಯ ಉಳಿತಾಯದ ಸಾಧನವಲ್ಲ ಎನ್ನುತ್ತಾರೆ ಎಸ್‌ಎಜಿ ಇನ್ಫೋಟೆಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಮಿತ್ ಗುಪ್ತಾ. ನೀವು ಹೆಚ್ಚು ತೆರಿಗೆ ರಿಫಂಡ್ ಪಡೆಯಲು ಅನುಸರಿಸಬಹುದಾದ ಕ್ರಮಗಳ ವಿವರ ಇಲ್ಲಿದೆ.
- ನಿಮ್ಮ ಐಟಿಆರ್ ಅನ್ನು ಸಕಾಲಕ್ಕೆ ಸಲ್ಲಿಸಿ: ನಿಮ್ಮ ಆದಾಯ ತೆರಿಗೆ ವಿವರಗಳನ್ನು ನಿರ್ದಿಷ್ಟ ಗಡುವಿನ ಒಳಗೆಯೇ ಸಲ್ಲಿಸಿ. ಪೆನಾಲ್ಟಿಗಳನ್ನು ತಪ್ಪಿಸಿಕೊಳ್ಳಬಹುದು. ಇದು ಗರಿಷ್ಠ ರಿಫಂಡ್ ಪಡೆಯಲು ಸಹಕಾರಿಯಾಗುತ್ತದೆ.
- ಸರಿಯಾದ ಟ್ಯಾಕ್ಸ್ ಪದ್ಧತಿ ಆಯ್ಕೆ ಮಾಡಿಕೊಳ್ಳಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ಕೇಂದ್ರ ಬಜೆಟ್ ಮಂಡನೆಯ ವೇಳೆ ಹೊಸ ತೆರಿಗೆ ಪದ್ಧತಿಯನ್ನು(new income tax regime) ಅನ್ನು ಘೋಷಿಸಿದ್ದರು. ಐಟಿಆರ್ ಸಲ್ಲಿಸುವ ವೇಳೆಗ ತೆರಿಗೆದಾರರು ತಮಗೆ ಬೇಕಾದ ಪದ್ಧತಿ ಅನುಸರಿಸಬಹುದು ಎಂದು ಅವರು ಹೇಳಿದ್ದರು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸರಿಯಾದ ಪದ್ಧತಿ ಅನುಸರಿಸುವುದು ಮುಖ್ಯ.
- ಐಟಿಆರ್ ಸಲ್ಲಿಸಿದ ಬಳಿಕ 30 ದಿನಗಳೊಳಗೆ ವೆರಿಫೈ ಮಾಡುವುದು ಮುಖ್ಯ. ವೆರಿಫೈ ಮಾಡಿಕೊಳ್ಳದಿದ್ದರೆ ಅದು ಇನ್ ವ್ಯಾಲಿಡ್ (invalid) ಆಗುತ್ತದೆ. ಆಗ ತೆರಿಗೆದಾರು ಡೆಡ್ ಲೈನ್ ಮುಗಿಯದಿದ್ದರೆ ಮತ್ತೆ ಹೊಸತಾಗಿ ಐಟಿಆರ್ ಸಲ್ಲಿಸಬೇಕಾಗುತ್ತದೆ. ಗಡುವು ಮುಗಿದರೆ ತೆರಿಗೆದಾರರಿಗೆ ಮತ್ತೆ ಆ ವರ್ಷ ರಿಟರ್ನ್ ಫೈಲ್ ಮಾಡಲಾಗದು.
- ಕ್ಲೇಮ್ ಡಿಡಕ್ಷನ್: ಸಾರ್ವಜನಿಕ ಭವಿಷ್ಯ ನಿಧಿ (public provident fund- PPF) , ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ( national savings certificate -NSC), ರಾಷ್ಟ್ರೀಯ ಪಿಂಚಣಿ ಯೋಜನೆ (national pension scheme NPS) ಮೊದಲಾದ ಯೋಜನೆಗಳಲ್ಲಿ ಹೂಡಿಕೆ, ವಿಮೆ, ಗೃಹ ಸಾಲದ ಬಡ್ಡಿ ಇದ್ದರೆ ತೆರಿಗೆ ಉಳಿತಾಯ ಸಾಧ್ಯ. ಇವುಗಳಿಂದ ಗರಿಷ್ಠ ತೆರಿಗೆ ರಿಫಂಡ್ ಪಡೆಯಬಹುದು.
- ಬ್ಯಾಂಕ್ ಅಕೌಂಟ್ ವ್ಯಾಲಿಡೇಟ್: ನೀವು ನಿಮ್ಮ ಬ್ಯಾಂಕ್ ಖಾತೆ ಆದಾಯ ತೆರಿಗೆ ಟ್ಯಾಕ್ಸ್ ಫೈಲಿಂಗ್ ಇ-ಪೋರ್ಟಲ್ ಜತೆಗೆ ಸರಿಯಾಗಿ ವೆರಿಫೈ ಆಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಐಟಿ ಇಲಾಖೆ ರಿಫಂಡ್ ಅನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ.