Site icon Vistara News

Income Tax: ಪಿಂಚಣಿ ಪಡೆಯುವವರೂ ತೆರಿಗೆ ಪಾವತಿಸಬೇಕೇ? ಏನಿದೆ ನಿಯಮ?

Income Tax

ಆದಾಯ ತೆರಿಗೆ (Income Tax) ರಿಟರ್ನ್ (ITR) ಫೈಲಿಂಗ್ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆದಾಯ ತೆರಿಗೆಗೆ ಹಿರಿಯ ನಾಗರಿಕರು (senior citizens) ಕೂಡ ಅರ್ಹರಾಗಿರುತ್ತಾರೆಯೇ? ಈ ಕುರಿತು ಯಾವ ನಿಯಮಗಳಿವೆ ಎನ್ನುವ ಮಾಹಿತಿ ಇಲ್ಲಿದೆ.

ಹಿರಿಯ ನಾಗರಿಕರು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಪಿಂಚಣಿ (pension) ಮತ್ತು ನಿವೃತ್ತಿ ಪ್ರಯೋಜನಗಳ (retirement benefits) ಮೇಲೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಇದು ಕೆಲವು ನಿವೃತ್ತಿ ಪ್ರಯೋಜನ ಗಳೊಂದಿಗೆ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ.

ಪಿಪಿಎಫ್ ಮೆಚ್ಯೂರಿಟಿ ಮೊತ್ತ ಮತ್ತು ಗಳಿಸಿದ ಬಡ್ಡಿಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದ್ದರೂ ನಿವೃತ್ತಿಯ ಅನಂತರ ಪಡೆಯುವ ಗ್ರಾಚ್ಯುಟಿಗೆ 20 ಲಕ್ಷ ರೂ.ವರೆಗೆ ಮಾತ್ರ ತೆರಿಗೆ ವಿನಾಯಿತಿ ಇದೆ.

ಹಿರಿಯ ನಾಗರಿಕರ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ಪಿಂಚಣಿ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ. ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಗಳ ಪ್ರಕಾರ 3 ಲಕ್ಷ ರೂ.ವರೆಗಿನ ಪಿಂಚಣಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. 3 ಲಕ್ಷ ರೂ.ಗಿಂತ ಹೆಚ್ಚಿನ ಪಿಂಚಣಿ ಮೊತ್ತದಲ್ಲಿ ಹಿರಿಯ ನಾಗರಿಕರು ಎರಡೂ ತೆರಿಗೆ ನಿಯಮಗಳ ಅಡಿಯಲ್ಲಿ ತೆರಿಗೆಗಳನ್ನು ಪಾವತಿಸಲು ಹೊಣೆಗಾರರಾಗಿರುತ್ತಾರೆ.

ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಗಳ ಪ್ರಕಾರ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಪಿಂಚಣಿಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.


ಪಿಂಚಣಿಗೆ ಹೊಸ ತೆರಿಗೆ ಪದ್ಧತಿ ನಿಯಮ

3 ಲಕ್ಷ ರೂ.ವರೆಗಿನ ಪಿಂಚಣಿಗೆ ಯಾವುದೇ ತೆರಿಗೆ ಇಲ್ಲ. 3 ಲಕ್ಷ ರೂ. ನಿಂದ 6 ಲಕ್ಷ ರೂ. ವರೆಗೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ. 6 ಲಕ್ಷ ರೂ.ಗಿಂತ 9 ಲಕ್ಷ ರೂ. ಪಿಂಚಣಿಗೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತದೆ.

9 ಲಕ್ಷ ರೂ.ನಿಂದ 12 ಲಕ್ಷ ರೂ. ವರೆಗೆ ಶೇ. 15, 12 ಲಕ್ಷ ರೂ. ನಿಂದ 15 ಲಕ್ಷ ರೂ. ವರೆಗೆ ಶೇ.20, 15 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿಗೆ ಶೇ. 30ರಷ್ಟು ತೆರಿಗೆ ದರ ಅನ್ವಯಾವಾಗುತ್ತದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಬಜೆಟ್‌ನಲ್ಲಿ ಹೊಸ ತೆರಿಗೆ ಆಡಳಿತದ ಅಡಿಯಲ್ಲಿ 7 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ತೆರಿಗೆದಾರರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಘೋಷಿಸಿದರು. ಪ್ರಮಾಣಿತ 50,000 ರೂ. ಕಡಿತದೊಂದಿಗೆ (ಸ್ಟಾಂಡರ್ಡ್‌ ಡಿಡಕ್ಷನ್‌) ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆಗೆ ಒಳಪಡದ ಆದಾಯವು ಸುಮಾರು 7.50 ಲಕ್ಷ ರೂ. ಆಗಿದೆ.

ಇದನ್ನೂ ಓದಿ:Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

ಪಿಂಚಣಿಗೆ ಹಳೆಯ ತೆರಿಗೆ ಪದ್ಧತಿ ನಿಯಮ

3 ಲಕ್ಷ ರೂ.ವರೆಗಿನ ಪಿಂಚಣಿಗೆ ತೆರಿಗೆ ಇಲ್ಲ. 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಶೇ. 5ರಷ್ಟು ತೆರಿಗೆ ವಿಧಿಸಲಾಗುತ್ತದೆ. 5 ಲಕ್ಷ ರೂ.ಗಿಂತ 10 ಲಕ್ಷ ರೂ.ವರೆಗಿನ ಪಿಂಚಣಿ ಮೇಲೆ ಶೇ. 20 ರಷ್ಟು, 10 ಲಕ್ಷಕ್ಕಿಂತ ಹೆಚ್ಚಿನ ಪಿಂಚಣಿ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸಲಾಗುತ್ತದೆ.

Exit mobile version