ಹೊಸದಿಲ್ಲಿ: ಭಾರತದಲ್ಲಿ ಜುಲೈ-ಆಗಸ್ಟ್‌ನಲ್ಲಿ ಮತ್ತೊಂದು ಸುತ್ತಿನ ವಿದ್ಯುತ್ ಕೊರತೆ ಸಂಭವಿಸುವ ಸಾಧ್ಯತೆ ಇದೆ ಎಂದು ಸಂಶೋಧನಾ ಸಂಸ್ಥೆ ಸಿಆರ್‌ಇಎ ವರದಿ ತಿಳಿಸಿದೆ.
ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗುವ ಸಾಧ್ಯತೆ ಇದೆ. ಮುಂಗಾರು ಪೂರ್ವ ದಾಸ್ತಾನು ಕಡಿಮೆಯಾಗುತ್ತಿದೆ ಎಂದು ಸಿಆರ್‌ಇಎ ಅಲರ್ಟ್ ಮಾಡಿದೆ.
ಸದ್ಯಕ್ಕೆ ಪ್ರಮುಖ ಸ್ಥಾವರಗಳಲ್ಲಿ 1.35 ಕೋಟಿ ಟನ್ ಕಲ್ಲಿದ್ದಲು ದಾಸ್ತಾನು ಇದೆ. ಒಟ್ಟಾರೆ 2.07 ಕೋಟಿ ಟನ್ ದಾಸ್ತಾನು ಇದೆ. ಆದರೆ ವಿದ್ಯುತ ಬೇಡಿಕೆ ಹೆಚ್ಚಿದರೆ ಸವಾಲಾಗಿ ಪರಿಣಮಿಸಬಹುದು ಎಂದು ವರದಿ ಎಚ್ಚರಿಸಿದೆ.
ಕೇಂದ್ರ ವಿದ್ಯುತ್ ಪ್ರಾಧಿಕಾರದ ಪ್ರಕಾರ ಆಗಸ್ಟ್ ವೇಳೆಗೆ 214 ಗಿಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಬರಲಿದೆ. ಸರಾಸರಿ ವಿದ್ಯುತ್ ಬೇಡಿಕೆ ಏರಿಕೆಯಾಗಲಿದೆ. ಕಳೆದ ಮೇನಲ್ಲಿ 1,33,42.6 ಕೋಟಿ ಯುನಿಟ್ ವಿದ್ಯುತ್ ಗೆ ಬೇಡಿಕೆ ಇತ್ತು.
ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಮಳೆ ಅಡ್ಡಿಪಡಿಸುತ್ತದೆ. ಆಗ ಕಲ್ಲಿದ್ದಲನ್ನು ವಿದ್ಯುತ್ ಉತ್ಕೇಂಪಾದನಾ ಕೇಂದ್ರಗಳಿಗೆ ಸಾಗಿಸುವುದು ಕೂಡ ಕಷ್ಟವಾಗುತ್ತದೆ ಎಂದು ಸಿಆರ್‌ಇಎ ತಿಳಿಸಿದೆ. ಇತ್ತೀಚೆಗೆ ಸಂಭವಿಸಿದ ಕಲ್ಲಿದ್ದಲು ಬಿಕ್ಕಟ್ಟು ಕೂಡ ಉತ್ಪಾದನೆಗೆ ಸಂಬಂದಿಸಿದ್ದಲ್ಲ, ಸಾಗಣೆಗೆ ಸಂಬಂಧಿಸಿತ್ತು ಎಂದು ಮೂಲಗಳು ತಿಳಿಸಿವೆ.
ಭಾರತ 2021-22 ರಲ್ಲಿ 77 ಕೋಟಿ ಟನ್ ಕಲ್ಲಿದ್ದಲನ್ನು ಉತ್ಪಾದಿಸಿತ್ತು. ಹೀಗಿದ್ದರೂ ಇದು ಗಣಿಗಾರಿಕೆ ಸಾಮರ್ಥ್ಯದ ( 150 ಕೋಟಿ ಟನ್) ಸುಮಾರು ಅರ್ಧದಷ್ಟು ಮಾತ್ರ ಎಂದು ಸಿಆರ್‌ಇಎ ವಿಶ್ಲೇಷಕ ಸುನಿಲ್ ದಹಿಯಾ ತಿಳಿಸಿದ್ದಾರೆ. ಆದ್ದರಿಂದ ಕಲ್ಲಿದ್ದಲು ಉತ್ಪಾದನೆಯನ್ನು ತ್ವರಿತವಾಗಿ ಹೆಚ್ಚಿಸುವುದು ಹಾಗೂ ಪೂರೈಕೆಯನ್ನು ಸರಿಪಡಿಸುವುದರಿಂದ ಬಿಕ್ಕಟ್ಟನ್ನು ಬಗರಹರಿಸಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: BESCOM HELP LINE: ವಿದ್ಯುತ್ ವ್ಯತ್ಯಯ ದೂರಿಗೆ ಹೊಸ ವ್ಯಾಟ್ಸ್ಆ್ಯಪ್ ಸಹಾಯವಾಣಿ