Site icon Vistara News

India-China trade | ನಿರ್ಬಂಧಗಳ ಹೊರತಾಗಿಯೂ ಚೀನಾದ ಜತೆಗೆ ಭಾರತದ ವ್ಯಾಪಾರ ಗಣನೀಯ ಹೆಚ್ಚಳ

India China

ನವ ದೆಹಲಿ: ನಿರ್ಬಂಧಗಳ ಹೊರತಾಗಿಯೂ, ಚೀನಾದ ಜತೆಗೆ ಭಾರತದ ವ್ಯಾಪಾರದಲ್ಲಿ (India-China trade) ಗಣನೀಯ ಹೆಚ್ಚಳ ದಾಖಲಾಗಿದೆ.

ಚೀನಾ ಜತೆಗೆ ಭಾರತದ ವ್ಯಾಪಾರ ಕೊರತೆ ಪ್ರಸಕ್ತ ಸಾಲಿನ ಮೊದಲ ಏಳು ತಿಂಗಳಿನಲ್ಲಿ 51.50 ಶತಕೋಟಿ ಡಾಲರ್‌ಗೆ (4.17 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. 2021-22ರ ಇಡೀ ವರ್ಷದಲ್ಲಿ 73.31 ಶತಕೋಟಿ (5.93 ಲಕ್ಷ ಕೋಟಿ ರೂ.) ಡಾಲರ್‌ನಷ್ಟಿತ್ತು.

ಚೀನಾದಿಂದ ಭಾರತಕ್ಕೆ ಅಗ್ಗದ ವಸ್ತುಗಳ ರಫ್ತು ಭರಪೂರ ಹೆಚ್ಚಳವಾಗಿರುವುದನ್ನು ಈ ಅಂಕಿ ಅಂಶಗಳು ಬಿಂಬಿಸಿವೆ. ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರದಲ್ಲಿ 34% ಹೆಚ್ಚಳವಾಗಿದ್ದು, 115.83 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ( 9.38 ಲಕ್ಷ ಕೋಟಿ ರೂ.)

ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಭಾರತದ ಚೀನಾ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ, ಸ್ವಾವಲಂಬನೆಯನ್ನು ಹೆಚ್ಚಿಸಲು ಆದ್ಯತೆ ನೀಡುತ್ತಿದೆ. ಮುಖ್ಯವಾಗಿ ಗಲ್ವಾನ್‌ ಕಣಿವೆಯಲ್ಲಿ ಗಡಿ ಸಂಘರ್ಷದ ಬಳಿಕ, ಚೀನಾದ ಜತೆಗಿನ ವ್ಯಾಪಾರ ಚಟುವಟಿಕೆಗಳ ಮೇಲೆ ಕೆಲ ನಿರ್ಬಂಧಗಳನ್ನು ವಿಧಿಸಿತ್ತು. ಈ ನಿರ್ಬಂಧಗಳ ಹೊರತಾಗಿಯೂ, ಚೀನಾದಿಂದ ಆಮದು ಹೆಚ್ಚಳವಾಗುತ್ತಿದ್ದು, ಮತ್ತಷ್ಟು ಕಾರ್ಯತಂತ್ರಗಳ ಅಗತ್ಯತೆಯನ್ನು ಬಿಂಬಿಸಿದೆ.

Exit mobile version