ನವ ದೆಹಲಿ: ವಿಶ್ವದ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್‌ಗಳ (Powerful passport) ಪಟ್ಟಿಯನ್ನು ಲಂಡನ್ ಮೂಲದ ಹೆನ್ಲೆ ಪಾಸ್‌ಪೋರ್ಟ್ ಇಂಡೆಕ್ಸ್ ಬಿಡುಗಡೆಗೊಳಿಸಿದ್ದು, ಭಾರತ ೮೭ನೇ ಸ್ಥಾನ ಗಳಿಸಿದೆ. ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿದೆ. ಒಟ್ಟು ೧೯೩ ದೇಶಗಳ ಪಾಸ್‌ಪೋರ್ಟ್‌ಗಳನ್ನು ಇಂಡೆಕ್ಸ್ ಪರಿಗಣಿಸಿದೆ.
ಭಾರತದ ಪಾಸ್‌ಪೋರ್ಟ್‌ಗೆ ೨೦೨೨ರ ಏಪ್ರಿಲ್-ಜೂನ್ ಅವಧಿಯಲ್ಲಿ ೮೭ನೇ ಸ್ಥಾನವನ್ನು ಇಂಡೆಕ್ಸ್ ನೀಡಿದೆ. ೨೦೨೧ರಲ್ಲಿ ೯೦ನೇ ಸ್ಥಾನದಲ್ಲಿತ್ತು. ಭಾರತದ ಪಾಸ್‌ಪೋರ್ಟ್ ಜತೆಗೆ 60 ದೇಶಗಳಿಗೆ ಸುಲಭವಾಗಿ ಪ್ರವೇಶಿಸಬಹುದು. ೨೦೨೦ರಲ್ಲಿ ಕೇವಲ ೨೩ ದೇಶಗಳಿಗೆ ಮಾತ್ರ ಯಾವುದೇ ನಿರ್ಬಂಧ ಇಲ್ಲದೆ ಹೋಗಬಹುದಿತ್ತು.
ಮಾನ ದಂಡ ಯಾವುದು?: ದೇಶಗಳಿಗೆ ವೀಸಾ ರಹಿತ ಅಥವಾ ಮುಕ್ತ ಪ್ರವೇಶಕ್ಕೆ ಹೆಚ್ಚು ಅವಕಾಶ ನೀಡುವ ಪಾಸ್‌ಪೋರ್ಟ್ ಪ್ರಭಾವಿ ಎನ್ನಿಸುತ್ತದೆ. ಜನರಿಗೆ ಪ್ರಯಾಣಕ್ಕೆ ಹೆಚ್ಚಿನ ಸ್ವಾತಂತ್ರ್ಯವನ್ನು ಇಂಥ ಪಾಸ್‌ಪೋರ್ಟ್ ನೀಡುತ್ತದೆ. ಇದರ ಜತೆಗೆ ಹೂಡಿಕೆ ಹಾಗೂ ಜನಜೀವನದ ಗುಣಮಟ್ಟವನ್ನೂ ಪರಿಗಣಿಸಲಾಗುತ್ತದೆ. ವೀಸಾ ನಿರ್ಬಂಧಗಳು, ಅರ್ಹತೆಗಳನ್ನೂ ಪರಿಗಣಿಸಲಾಗುತ್ತದೆ.
ಜಪಾನ್ ಪಾಸ್‌ಪೋರ್ಟ್ ಅತ್ಯಂತ ಪ್ರಭಾವಿ ಏಕೆ?
ಜಪಾನ್‌ನ ಪಾಸ್‌ಪೋರ್ಟ್ ಹೊಂದಿರುವವರು ೧೯೩ ದೇಶಗಳಿಗೆ ವೀಸಾ ಇಲ್ಲದೆ ಅಥವಾ ಹೆಚ್ಚಿನ ನಿರ್ಬಂಧಗಳಿಲ್ಲದೆ ಮುಕ್ತವಾಗಿ ಪ್ರವೇಶಿಸಬಹುದು. ಹೀಗಾಗಿ ವಿಶ್ವದಲ್ಲಿಯೇ ಅತ್ಯಂತ ಪ್ರಭಾವಿ ಪಾಸ್‌ಪೋರ್ಟ್ ಎನ್ನಿಸಿದೆ. ರಷ್ಯಾದ ಪಾಸ್‌ಪೋರ್ಟ್ ಇದ್ದರೆ ೧೧೯ ದೇಶಗಳಿಗೆ ಸುಲಭವಾಗಿ ಹೋಗಬಹುದು. ಇಂಡೆಕ್ಸ್‌ನಲ್ಲಿ ೫೦ನೇ ಸ್ಥಾನ ಪಡೆದಿದೆ. ಅಪ್ಘಾನಿಸ್ತಾನ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅದರ ಪಾಸ್‌ಪೋರ್ಟ್ ಇದ್ದರೆ ೨೭ ದೇಶಗಳಿಗೆ ಮಾತ್ರ ಮುಕ್ತವಾಗಿ ಹೋಗಬಹುದು.
ಪಾಸ್‌ಪೋರ್ಟ್ | ಸ್ಥಾನ | ಎಷ್ಟು ದೇಶಗಳಿಗೆ ಮುಕ್ತ ಪ್ರವೇಶಾವಕಾಶ |
ಜಪಾನ್ | 1 | 193 |
ಸಿಂಗಾಪುರ | 2 | 192 |
ದಕ್ಷಿಣ ಕೊರಿಯಾ | 2 | 192 |
ಜರ್ಮನಿ | 3 | 190 |
ಸ್ಪೇನ್ | 3 | 190 |
ಫಿನ್ಲೆಂಡ್ | 4 | 189 |
ಇಟಲಿ | 4 | 189 |
ಲುಕ್ಸೆಂಬರ್ಗ್ | 4 | 189 |
ಆಸ್ಟ್ರಿಯಾ | 5 | 188 |
ಡೆನ್ಮಾರ್ಕ್ | 5 | 188 |
ಭಾರತ | 87 | 60 |