Site icon Vistara News

Historical Change | ಭಾರತದಲ್ಲಿ 15 ವರ್ಷಗಳಲ್ಲಿ 41.5 ಕೋಟಿ ಮಂದಿ ಬಡತನದಿಂದ ಪಾರು: ವಿಶ್ವಸಂಸ್ಥೆ

united nation

ನವ ದೆಹಲಿ: ಭಾರತದಲ್ಲಿ 15 ವರ್ಷಗಳಲ್ಲಿ 41.5 ಕೋಟಿ ಜನರು ಬಡತನದ ದವಡೆಯಿಂದ ಪಾರಾಗಿದ್ದಾರೆ. ಇದು ಐತಿಹಾಸಿಕ ಬದಲಾವಣೆಯಾಗಿದೆ ( Historical Change ) ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಕಳೆದ 2005-06 ಮತ್ತು 2019-21 ರ ಅವಧಿಯಲ್ಲಿ 41.5 ಕೋಟಿ ಜನತೆ ಬಡತನದ ದವಡೆಯಿಂದ ಪಾರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ಭಾರತದಲ್ಲಿ ಬಡತನದ ಪ್ರಮಾಣ 55.1%ರಿಂದ 16.4%ಕ್ಕೆ ಇಳಿಕೆಯಾಗಿದೆ ಎಂದು ವಿಶ್ವಸಂಸ್ಥೆ ಇತ್ತೀಚಿನ ಮಲ್ಟಿಡೈಮೆನ್ಷನಲ್‌ ಪವರ್ಟಿ ಇಂಡೆಕ್ಸ್‌ ( Multidimensional Poverty Index) ತಿಳಿಸಿದೆ. ಯುಎನ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌ (UNDP) ಮತ್ತು ಆಕ್ಸ್‌ಫರ್ಡ್‌ ಪವರ್ಟಿ & ಹ್ಯೂಮನ್‌ ಡೆವಲಪ್‌ಮೆಮಟ್‌ ಇನೀಶಿಯೇಟಿವ್‌ (OPHI) ಜಂಟಿಯಾಗಿ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಬಡತನವನ್ನು ಗಣನೀಯವಾಗಿ ತಗ್ಗಿಸುವ ಗುರಿಯನ್ನು 2030ಕ್ಕೆ ಸಾಧಿಸಲು ಸಾಧ್ಯವಿದೆ ಎಂಬುದಕ್ಕೆ ಭಾರತದಲ್ಲಿ ಸಂಭವಿಸಿರುವ ಬೆಳವಣಿಗೆ ಪುಷ್ಟಿ ನೀಡಿದೆ ಎಂದು ವರದಿ ವಿಶ್ವಾಸ ವ್ಯಕ್ತಪಡಿಸಿದೆ.

Exit mobile version