Site icon Vistara News

ಅನಿಲ ಆಮದು ಮೂಲಕ ಎನ್‌ಟಿಪಿಸಿ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆಗೆ ಚಿಂತನೆ, ದರ 4 ಪಟ್ಟು ಏರಿಕೆ ಸಂಭವ

power

ನವದೆಹಲಿ: ಮುಂಬರುವ ಮಳೆಗಾಲದಲ್ಲಿ ಕಲ್ಲಿದ್ದಲು ಪೂರೈಕೆಯ ಕೊರತೆಯಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ಅನಿಲವನ್ನು ಆಮದು ಮಾಡಿಕೊಂಡು ಎನ್‌ಟಿಪಿಸಿ ಘಟಕಗಳಿಗೆ ಪೂರೈಸಲು ಕೇಂದ್ರ ಸರಕಾರ ಪರಿಶೀಲಿಸುತ್ತಿದೆ. ಇದರ ಪರಿಣಾಮ ವಿದ್ಯುತ್‌ ವೆಚ್ಚ ಪ್ರತಿ ಯುನಿಟ್‌ಗೆ 22-23 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಅಂದರೆ ಈಗಿನ ದರಕ್ಕಿಂತ 4-5 ಪಟ್ಟು ಹೆಚ್ಚು.

ತಾಪಮಾನ ಏರಿಕೆಯ ಪರಿಣಾಮ ವಿದ್ಯುತ್‌ಗೆ ಬೇಡಿಕೆ ಭಾರಿ ಪ್ರಮಾಣದಲ್ಲಿ ವೃದ್ಧಿಸಿದೆ. ಪರಿಣಾಮ ವಿದ್ಯುತ್‌ ಘಟಕಗಳಲ್ಲಿ ಕಲ್ಲಿದ್ದಲು ದಾಸ್ತಾನು ಸೀಮಿತವಾಗುತ್ತಿದೆ. ಮಳೆಗಾಲದಲ್ಲಿ ಕಲ್ಲಿದ್ದಲು ಪೂರೈಕೆ ಮತ್ತಷ್ಟು ಇಳಿಯುವ ಸಾಧ್ಯತೆ ಇದೆ. ಆದ್ದರಿಂದ ಸಂಭವನೀಯ ವಿದ್ಯುತ್‌ ಬಿಕ್ಕಟ್ಟು ತಪ್ಪಿಸಲು ಅನಿಲವನ್ನು ಆಮದು ಮಾಡಿ ವಿದ್ಯುತ್‌ ಘಟಕಗಳಿಗೆ ಪೂರೈಸುವ ಚಿಂತನೆ ನಡೆದಿದೆ. ವಿದ್ಯುತ್‌ ಸಚಿವಾಲಯ ಎನ್‌ಟಿಪಿಸಿ ಮತ್ತು ಗೇಲ್‌ನ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಿದೆ.

ಅನಿಲ ಮೂಲದ ವಿದ್ಯುತ್‌ ಉತ್ಪಾದನೆ ದುಬಾರಿಯಾದ್ದರಿಂದ ರಾಜ್ಯಗಳು ಒಪ್ಪುತ್ತವೆಯೋ, ಇಲ್ಲವೋ ಎಂಬ ಪ್ರಶ್ನೆ ಉಂಟಾಗಿದೆ. ಜೂನ್-ಸೆಪ್ಟೆಂಬರ್‌ ಅವಧಿಯಲ್ಲಿ ಸಾಮಾನ್ಯವಾಗಿ ಮುಂಗಾರು ಮಳೆ ದೇಶವನ್ನು ಆವರಿಸುತ್ತದೆ. ಕೇಂದ್ರ ಸರಕಾರ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ರಾಜ್ಯಗಳಿಗೆ ಸೂಚಿಸಿದೆ.

ಇದನ್ನೂ ಓದಿ: ವಿಸ್ತಾರ Explainer: ವಿದ್ಯುತ್‌ ಘಟಕಗಳಲ್ಲಿ ಇನ್ನು 9 ದಿನಗಳಿಗೆ ಮಾತ್ರ ಕಲ್ಲಿದ್ದಲು ಲಭ್ಯ, ಆಮದಿಗೆ ಕೇಂದ್ರ ಸೂಚನೆ

Exit mobile version