ನವ ದೆಹಲಿ: ಭಾರತ 5 ವರ್ಷದಲ್ಲಿ ಭಾರತದ 3ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ವಿಶ್ವಾಸ ಇದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. (Piyush Goyal) 2047ರ ವೇಳೆಗೆ ಭಾರತ ಈಗಿನ ಅಮೆರಿಕದ ಸ್ಥಾನವನ್ನು ಅಲಂಕರಿಸಲಿದೆ ಎಂದು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಆರ್ಥಿಕ ಸಹಕಾರ ಒಪ್ಪಂದ (Regional comprehensive economic partnership-RCEP) ಒಪ್ಪಂದಕ್ಕೆ ಒಂದು ವೇಳೆ ಭಾರತ ಒಪ್ಪಿದ್ದರೆ ಭಾರಿ ವಿಪತ್ತು ಸಂಭವಿಸುತ್ತಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನೆಚ್ಚರಿಕೆಯ ಸಲಹೆಯನ್ನು ನೀಡಿದ್ದರು ಎಂದು ವಿವರಿಸಿದರು.
ಏಷ್ಯಾ ಎಕನಾಮಿಕ್ ಡೈಲಾಗ್ 2023 ಕಾರ್ಯಕ್ರಮದಲ್ಲಿ ಸಚಿವ ಪಿಯೂಷ್ ಗೋಯೆಲ್ ಶನಿವಾರ ಭಾಗವಹಿಸಿ ಮಾತನಾಡಿದರು. 140 ಕೋಟಿ ಜನಸಂಖ್ಯೆಯ ಭಾರತ 30-40 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದರು.