Site icon Vistara News

Laptop Imports: ಲ್ಯಾಪ್‌ಟ್ಯಾಪ್ ಆಮದು ನಿಷೇಧ ಇಲ್ಲ! ಉಲ್ಟಾ ಹೊಡೆಯಿತಾ ಕೇಂದ್ರ ಸರ್ಕಾರ?

Laptop Tablet And Computers

ನವದೆಹಲಿ: ಇತ್ತೀಚೆಗಷ್ಟೇ ಲ್ಯಾಪ್‌ಟ್ಯಾಪ್‌ ಆಮದು (Laptop Imports) ಮೇಲೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರವು (Central Government) ಈಗ ಮತ್ತೆ ಯೂ ಟರ್ನ್ ಹೊಡೆಯಿತಾ? ಹೌದು, ಈ ತರಹದ ಪ್ರಶ್ನೆಯೊಂದು ಎದ್ದಿದೆ. ಲ್ಯಾಪ್‌ಟ್ಯಾಪ್ ಆಮದಿಗೆ ಉದ್ಯಮ (Industry) ಹಾಗೂ ವಾಷಿಂಗ್ಟನ್ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿಷೇಧ (Lapto imports ban) ಯೋಜನೆಯಿಂದ ಹಿಂದೆ ಸರಿಯುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತವು ಲ್ಯಾಪ್‌ಟಾಪ್ ಆಮದುಗಳ ಮೇಲೆ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ವ್ಯಾಪಾರ ಕಾರ್ಯದರ್ಶಿ ಸುನಿಲ್ ಬರ್ತ್ವಾಲ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರವು “ಆಮದುದಾರರ ಮೇಲೆ ನಿಕಟವಾಗಿ ನಿಗಾ ಇಡಬೇಕೆಂದು ಮಾತ್ರ ಬಯಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.

ಆಗಸ್ಟ್ 3 ರಂದು ಘೋಷಿಸಲಾದ ಆಮದು ನೀತಿಯು ವಿಶ್ವಾಸಾರ್ಹ ಹಾರ್ಡ್‌ವೇರ್ ಮತ್ತು ಸಿಸ್ಟಮ್‌ಗಳು ಭಾರತವನ್ನು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿತ್ತು. ಆದರೆ ಉದ್ಯಮದಿಂದ ಎದುರಾದ ಆಕ್ಷೇಪಣೆಗಳು ಮತ್ತು ವಾಷಿಂಗ್ಟನ್‌ನಿಂದ ಟೀಕೆಗಳ ನಂತರ ಮೂರು ತಿಂಗಳು ವಿಳಂಬವಾಗಿದೆ. ಆಮದು ನಿಷೇಧ ನೀತಿಯು ಡೆಲ್, ಎಚ್‌ಪಿ, ಆ್ಯಪಲ್, ಸ್ಯಾಮ್ಸಂಗ್ ಮತ್ತು ಲೆನೊವೊಗಳಂಥ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ.

ಈ ಸುದ್ದಿಯನ್ನೂ ಓದಿ: Laptop Import: ಲ್ಯಾಪ್ ಟಾಪ್, ಟ್ಯಾಬ್ಲೆಟ್ ಆಮದು ನಿರ್ಬಂಧ; ಕೇಂದ್ರ ಸರ್ಕಾರದ ಕ್ರಮಕ್ಕೆ ಸಿಐಎಂಇಐ ಶ್ಲಾಘನೆ

ಕೇಂದ್ರ ಸರ್ಕಾರವು ಈಗಾಗಲೇ ಉದ್ಯಮದ ಮಂದಿಯೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಬಳಿಕ ಲ್ಯಾಪ್‌ಟ್ಯಾಪ್ ಆಮದು ಕುರಿತಂತೆ ಹೊಸ ಆದೇಶವನ್ನು ತಿಂಗಾಳಂತ್ಯಕ್ಕೆ ಹೊರಡಿಸುವ ಸಾಧ್ಯತೆಗಳಿವೆ ಎಂದು ಸವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ ಸಂತೋಷ್ ಕುಮಾರ್ ಸಾರಂಗಿ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಆದರೆ, ಅಧಿಕಾರಿಯು ಹೊಸ ನೀತಿಯ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಲಾಗಿದೆ.

ತಿಂಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರವು ಲ್ಯಾಪ್‌ಟ್ಯಾಪ್ ಆಮದು ಮೇಲೆ ನಿಷೇಧ ಹೇರುವುದಾಗಿ ಪ್ರಕಟಿಸಿತ್ತು. ದೇಶೀಯವಾಗಿ ಲ್ಯಾಪ್‌ಟ್ಯಾಪ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡುವುದಕ್ಕಾಗಿ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆದರೆ, ಇದೀಗ ಅಧಿಕಾರಿಗಳು ಮಾತ್ರ ಈ ವಿಷಯದಲ್ಲಿ ಉಲ್ಟಾ ಹೊಡೆದಿದ್ದಾರೆ. ಸರ್ಕಾರ ಎಂದಿಗೂ ಆಮದು ನಿಷೇಧ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version