ನವ ದೆಹಲಿ: ಬಿಲಿಯನೇರ್ ಮುಕೇಶ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಜಿಯೊ, (Jio ) ಭಾರತದ ಪ್ರಬಲ ಟೆಲಿಕಾಂ ಬ್ರಾಂಡ್ ಆಗಿ ಹೊರಹೊಮ್ಮಿದ್ದು, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಅನ್ನು ಹಿಂದಿಕ್ಕಿದೆ ಎಂದು ಬ್ರಾಂಡ್ ಇಂಟಲಿಜೆನ್ಸ್ ಮತ್ತು ಡೇಟಾ ಇನ್‌ಸೈಟ್ಸ್ ಕಂಪನಿ ಟಿಆರ್‌ಎ ವರದಿ ತಿಳಿಸಿದೆ.
ಭಾರತದ 2022ರ ಪ್ರಬಲ ಬ್ರಾಂಡ್‌ಗಳ ಪಟ್ಟಿಯನ್ನು ಟಿಆರ್‌ಎ ಬಿಡುಗಡೆಗೊಳಿಸಿದೆ. ಬ್ರಾಂಡ್‌ಗಳ ಬಲಾಬಲವನ್ನು ಅಳೆದಿದೆ. ಟೆಲಿಕಾಂ ಕೆಟಗರಿಯಲ್ಲಿ ರಿಲಯನ್ಸ್ ಜಿಯೊ ಮೊದಲ ಸ್ಥಾನ ಹಾಗೂ ಭಾರ್ತಿ ಏರ್‌ಟೆಲ್ ದ್ವಿತೀಯ ಮತ್ತು ವೊಡಾಫೋನ್ ಐಡಿಯಾ ತೃತೀಯ ಸ್ಥಾನ ಗಳಿಸಿದೆ. ಬಿಎಸ್ಸೆನ್ನೆಲ್ ನಾಲ್ಕನೇ ಸ್ಥಾನ ಗಳಿಸಿದೆ.
ಜವಳಿ ಕೆಟಗರಿಯಲ್ಲಿ ಆಡಿಡಾಸ್ ಮೊದಲ ಸ್ಥಾನದಲ್ಲಿದೆ. ನೈಕ್, ರೇಮಂಡ್, ಅಲೆನ್ ಸೋಲಿ, ಪೀಟರ್ ಇಂಗ್ಲೆಂಡ್ ನಂತರದ ಸ್ಥಾನದಲ್ಲಿವೆ.
ಆಟೊಮೊಬೈಲ್ ಪಟ್ಟಿಯಲ್ಲಿ ಬಿಎಂಡಬ್ಲ್ಯು ಮೊದಲ ಸ್ಥಾನದಲ್ಲಿದೆ. ಟೊಯೊಟಾ, ಹುಂಡೈ, ಹೋಂಡಾ ನಂತರದ ಸ್ಥಾನದಲ್ಲಿವೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಯಲ್ಲಿ ಎಲ್‌ಐಸಿ ಮೊದಲ ಸ್ಥಾನದಲ್ಲಿದೆ. ಎಸ್‌ಬಿಐ ಮತ್ತು ಐಸಿಐಸಿಐ ಬ್ಯಾಂಕ್ 2 ಮತ್ತು 3ನೇ ಸ್ಥಾನದಲ್ಲಿದೆ.
ಕನ್‌ಸ್ಯೂಮರ್ ಅಪ್ಲೈಯನ್ಸ್ ವಿಭಾಗದಲ್ಲಿ ಕೆಂಟ್, ಲಿವ್‌ಪ್ಯೂರ್, ಒಕಯಾ ಮುಂಚೂಣಿಯಲ್ಲಿವೆ. ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಲ್‌ಜಿ, ಸೋನಿ, ಸ್ಯಾಮ್‌ಸಂಗ್ ಟಾಪ್ 3 ಬ್ರಾಂಡ್‌ಗಳಾಗಿವೆ.