ಮುಂಬಯಿ: ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಡಬಲ್-ಡೆಕ್ಕರ್ ಬಸ್‌ಗೆ (Electric double-decker bus) ಮುಂಬಯಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಚಾಲನೆ ನೀಡಿದರು.
ಅಶೋಕ್ ಲೇಲ್ಯಾಂಡ್ಸ್ ಕಂಪನಿಯ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗೆ ಚಾಲನೆ ನೀಡಿದ ಅವರು, ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಕಚ್ಚಾ ತೈಲದ ಆಮದು ತಗ್ಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಭಾರತ್ ಅಭಿಯಾನಕ್ಕೆ ಇದು ಪೂರಕವಾಗಿದೆ ಎಂದರು.
ಅಶೋಕ್ ಲೇಲ್ಯಾಂಡ್ ೧೯೬೭ರಲ್ಲಿ ಮುಂಬಯಿನಲ್ಲಿ ಡಬಲ್ ಡೆಕ್ಕರ್ ಬಸ್ ಅನ್ನು ಪರಿಚಯಿಸಿತ್ತು. ಇದೀಗ ಎಲೆಕ್ಟ್ರಿಕ್ ಮತ್ತು ಹವಾನಿಯಂತ್ರಿತ ಬಸ್ ಅನ್ನು ಪರಿಚಯಿಸಿದೆ. ಭಾರತದಲ್ಲಿಯೇ ಬಸ್ ಅನ್ನು ನಿರ್ಮಿಸಲಾಗಿದೆ. (Switch EiV 22) ಅತ್ಯಾಧುನಿಕ ವಿನ್ಯಾಸ ಮತ್ತು ನಾನಾ ಅನುಕೂಲಗಳನ್ನು ಒಳಗೊಂಡಿದೆ. ವಿಶ್ವದಲ್ಲಿಯೇ ಮೊದಲ ಸೆಮಿ ಲೋ ಫ್ಲೋರ್, ಏರ್ ಕಂಡೀಶನರ್, ಡಬಲ್-ಡೆಕ್ಕರ್ ಬಸ್ ಇದಾಗಿದೆ. ಎಂದು ಕಂಪನಿ ತಿಳಿಸಿದೆ. ಎರಡು ಮೆಟ್ಟಿಲುಗಳು, ಒಂದು ತುರ್ತು ನಿರ್ಗಮನ ದ್ವಾರವನ್ನು ಒಳಗೊಂಡಿದೆ. ೬೫ ಪ್ರಯಾಣಿಕರು ಪ್ರಯಾಣಿಸಬಹುದು. ಒಂದು ಸಲ ಚಾರ್ಜ್ ಆದ ಬಳಿಕ ೨೫೦ ಕಿ.ಮೀ ಸಂಚರಿಸಬಲ್ಲುದು. 2023ರೊಳಗೆ ೨೦೦ ಎಲೆಕ್ಟ್ರಿಕ್ ಬಸ್‌ಗಳನ್ನು ಕಂಪನಿಯು ಮುಂಬಯಿಗೆ ನೀಡಲಿದೆ.