ನವದೆಹಲಿ: ಭಾರತದ ಜಿಡಿಪಿ ಬೆಳವಣಿಗೆ ಕಳೆದ 2021-22ರಲ್ಲಿ ಶೇ.8.7ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ. ಕೋವಿಡ್ ಪೂರ್ವ ಮಟ್ಟಕ್ಕಿಂತ ತುಸು ಹೆಚ್ಚಳವಾಗಿದೆ.
2022ರ ಜನವರಿ-ಮಾರ್ಚ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.1ರಷ್ಟು ಚೇತರಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಭಾರತದ ಜಿಡಿಪಿ ಮೌಲ್ಯ 2021-22ರ ಸಾಲಿಗೆ 147 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2020-21 ರಲ್ಲಿ 135ಲಕ್ಷ ಕೋಟಿ ರೂ.ಗಳಾಗಿತ್ತು.
2020-21ರಲ್ಲಿ ಶೇ. 6.6ಕುಸಿದಿದ್ದ ಜಿಡಿಪಿ 2021-22೨ರಲ್ಲಿ ಶೇ.8.7ಕ್ಕೆ ವೃದ್ಧಿಸಿದೆ.