ನವ ದೆಹಲಿ: ಭಾರತದ ಸಗಟು ಹಣದುಬ್ಬರ ಕಳೆದ ಆಗಸ್ಟ್‌ನಲ್ಲಿ 12.41%ಕ್ಕೆ ಇಳಿಕೆಯಾಗಿದೆ. 2022ರ ಜುಲೈನಲ್ಲಿ 13.93% ಇತ್ತು. ಸತತ 17 ತಿಂಗಳಿನಿಂದ ಸಗಟು ಹಣದುಬ್ಬರ ಎರಡಂಕಿಯಲ್ಲಿದೆ. (WPI Inflation) ಕಳೆದ 11 ತಿಂಗಳಿನಲ್ಲಿಯೇ ಕನಿಷ್ಠ ಮಟ್ಟಕ್ಕೆ ಸಗಟು ಹಣದುಬ್ಬರ ತಗ್ಗಿದೆ.
ಖಾದ್ಯ ತೈಲ, ಆಹಾರ ವಸ್ತುಗಳು, ಲೋಹ, ರಾಸಾಯನಿಕ, ವಿದ್ಯುತ್ ಇತ್ಯಾದಿಗಳ ದರಗಳು ಉನ್ನತ ಮಟ್ಟದಲ್ಲಿದ್ದರೂ, ಜುಲೈಗೆ ಹೋಲಿಸಿದರೆ ಇಳಿಕೆಯಾಗಿತ್ತು. 2021ರ ಆಗಸ್ಟ್‌ನಲ್ಲಿ ಸಗಟು ಹಣದುಬ್ಬರ 11.64% ಇತ್ತು.
ಹೀಗಿದ್ದರೂ ಆಗಸ್ಟ್‌ನಲ್ಲಿ ಗ್ರಾಹಕ ದರ ಆಧಾರಿತ ಹಣದುಬ್ಬರ 7% ದಾಖಲಾಗಿದ್ದು, ಒಟ್ಟಾರೆಯಾಗಿ ಆಹಾರ ವಸ್ತುಗಳ ದರ ಏರಿಕೆ ಪ್ರಭಾವ ಬೀರಿದೆ. ಅಕ್ಕಿ, ಗೋಧಿ, ತರಕಾರಿಗಳ ದರ ಏರಿಕೆ ಕೂಡ ಹಣದುಬ್ಬರದ ಉನ್ನತ ಮಟ್ಟಕ್ಕೆ ಕಾರಣವಾಗಿದೆ.