ನವ ದೆಹಲಿ: ಇಂಡಿಗೊ ಏರ್‌ಲೈನ್ ಕಳೆದ ಜನವರಿ-ಮಾರ್ಚ್ ಅವಧಿಯಲ್ಲಿ 919 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ 1681 ಕೋಟಿ ರೂ. ನಷ್ಟಕ್ಕೀಡಾಗಿತ್ತು. 2022-23ರಲ್ಲಿ ಒಟ್ಟಾರೆಯಾಗಿ ಕಂಪನಿ 305 ಕೋಟಿ ರೂ. ನಷ್ಟಕ್ಕೀಡಾಗಿತ್ತು.
ಇಂಡಿಗೊ ಏರ್‌ಲೈನ್ 2021-22ರಲ್ಲಿ 6,162 ಕೋಟಿ ರೂ. ನಷ್ಟಕ್ಕೀಡಾಗಿತ್ತು. ಬಿಎಸ್‌ಇನಲ್ಲಿ ಗುರುವಾರ ಕಂಪನಿಯ ಷೇರು ದರ 2,264 ರೂ.ಗಳಲ್ಲಿ ಇತ್ತು. ಕೋವಿಡ್ ಬಿಕ್ಕಟ್ಟಿನ ಸಂದರ್ಭ ತೀವ್ರ ನಷ್ಟದಲ್ಲಿದ್ದ ಇಂಡಿಗೊ ಏರ್‌ಲೈನ್ ಬಳಿಕ ತ್ರೈಮಾಸಿಕ ಲಾಭದ ಹಳಿಗೆ ಮರಳಿದೆ.
ವೈಮಾನಿಕ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಚುರುಕಾಗಿದ್ದು, ಇದರ ಪರಿಣಾಮ ಇಂಡಿಗೊ ತ್ರೈಮಾಸಿಕ ಲಾಭವನ್ನು ದಾಖಲಿಸಿದೆ ಎಂದು ಸಿಇಒ ಪೀಟರ್ ಎಲ್ಬರ್ಸ್ ತಿಳಿಸಿದ್ದಾರೆ. ಇಂಡಿಯೊದ ಆದಾಯ 2022-23ರಲ್ಲಿ 54,446 ಕೋಟಿ ರೂ.ಗೆ ಏರಿತ್ತು.
ಇದನ್ನೂ ಓದಿ: IndiGo Flight: ಬೆಂಗಳೂರಿನಿಂದ ವಾರಾಣಸಿಗೆ ಹೋಗುತ್ತಿದ್ದ ಇಂಡಿಗೊ ವಿಮಾನ ತೆಲಂಗಾಣದಲ್ಲಿ ತುರ್ತು ಲ್ಯಾಂಡ್
ಇಂಡಿಗೊ ಏರ್‌ಲೈನ್ 2023ರ ಮಾರ್ಚ್ ಅಂತ್ಯದ ವೇಳೆಗೆ 304 ವಿಮಾನಗಳನ್ನು ಹೊಂದಿದೆ. 2006ರಲ್ಲಿ ಇಂಡಿಗೊ ಏರ್‌ಲೈನ್ ಅನ್ನು ಸ್ಥಾಪಿಸಲಾಗಿತ್ತು. 101 ಸ್ಥಳಗಳಿಗೆ ಇಂಡಿಗೊ ವಿಮಾನದ ಹಾರಾಟ ಲಭ್ಯವಿದೆ. ರಾಹುಲ್ ಭಾಟಿಯಾ ಇದರ ಸ್ಥಾಪಕರು.