ನವ ದೆಹಲಿ: ಏರ್ ಇಂಡಿಯಾ ಬಳಿಕ ಇದೀಗ ಇಂಡಿಗೊ ಕೂಡ 500 ವಿಮಾನಗಳನ್ನು ಏರ್‌ಬಸ್‌ನಿಂದ ಖರೀದಿಸಲು ಆರ್ಡರ್ ನೀಡಿರುವುದಾಗಿ ತಿಳಿಸಿದೆ. ಇಂಡಿಗೊ ತನ್ನ ವಿಸ್ತರಣೆಯ ಭಾಗವಾಗಿ ಟರ್ಕಿಶ್ ಏರ್‌ಲೈನ್ ಜತೆ ಸಹಭಾಗಿತ್ವ ಮಾಡಿಕೊಂಡಿದ್ದು, ವಿಮಾನಗಳನ್ನು ಖರೀದಿಸಲಿದೆ ಎಂದು (IndiGo expansion plan) ಕಂಪನಿಯ ಇಂಟರ್‌ನ್ಯಾಶನಲ್ ಸೇಲ್ಸ್ ವಿಭಾಗದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಯುರೋಪ್‌ಗೆ ವಿಮಾನ ಹಾರಾಟ ಹೆಚ್ಚಳ:
ಇಂಡಿಗೊ ಯುರೋಪ್‌ನಲ್ಲಿ ತನ್ನ ವಿಮಾನ ಹಾರಾಟವನ್ನು ವಿಸ್ತರಿಸಲಿದೆ. ಭಾರತದಿಂದ ಇಸ್ತಾನ್‌ಬುಲ್ ಮತ್ತು ಯುರೋಪ್‌ಗೆ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ. 2030 ತನಕ ವಿಮಾನಗಳು ಬಿಡುಗಡೆಯಾಗಲಿದೆ ಎಂದು ಏರ್‌ಲೈನ್ ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಈಗ 300ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸುತ್ತಿದ್ದೇವೆ. ಜತೆಗೆ 500 ವಿಮಾನಗಳಿಗೆ ಆರ್ಡರ್ ನೀಡಿದ್ದೇವೆ. ದೇಶೀಯ ಮಾರುಕಟ್ಟೆಗೆ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಹೆಚ್ಚಲಿದೆ ಎಂದು ಮಲ್ಹೋತ್ರಾ ವಿವರಿಸಿದ್ದಾರೆ.