Site icon Vistara News

Industrial production | ಅಕ್ಟೋಬರ್‌ನಲ್ಲಿ ಕಾರ್ಖಾನೆಗಳಲ್ಲಿ ಉತ್ಪಾದನೆ 4% ಇಳಿಕೆ

production

ನವ ದೆಹಲಿ: ದೇಶದ ಕಾರ್ಖಾನೆಗಳಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಉತ್ಪಾದನೆ 4% ಇಳಿಕೆಯಾಗಿದೆ (Industrial production) ಎಂದು ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ವರದಿ ತಿಳಿಸಿದೆ.

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ ಐಐಪಿ, ಕಳೆದ ಅಕ್ಟೋಬರ್‌ನಲ್ಲಿ 129.6 ಅಂಶಗಳಿಗೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ ಇದು 133.5 ರಷ್ಟಿತ್ತು.

2022ರ ಅಕ್ಟೋಬರ್‌ನಲ್ಲಿ ಉತ್ಪಾದನೆ ವಲಯ 5.5% ಇಳಿಕೆ ದಾಖಲಿಸಿತ್ತು. ಗಣಿಗಾರಿಕೆ 2.5% ಮತ್ತು ವಿದ್ಯುತ್‌ ಉತ್ಪಾದನೆ 1.2% ವಿಸ್ತರಿಸಿತ್ತು. ಈ ವರ್ಷ ಏಪ್ರಿಲ್- ಅಕ್ಟೋಬರ್‌ನಲ್ಲಿ ಒಟ್ಟಾರೆಯಾಗಿ ಕೈಗಾರಿಕಾ ಉತ್ಪಾದನೆಯ ಬೆಳವಣಿಗೆ 5.3% ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 20.5% ಇತ್ತು.

Exit mobile version