ನವ ದೆಹಲಿ: ಭಾರತದ ಉದ್ಯಮ ವಲಯದ ಉತ್ಪಾದನೆ ಕಳೆದ ಸೆಪ್ಟೆಂಬರ್‌ನಲ್ಲಿ 3.1% (IIP) ಏರಿಕೆಯಾಗಿದೆ.
ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (NSO) ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, 2022ರ ಸೆಪ್ಟೆಂಬರ್‌ನಲ್ಲಿ ಉತ್ಪಾದನೆ 1.8% ವೃದ್ಧಿಸಿತ್ತು. ಗಣಿಗಾರಿಕೆಯ ಉತ್ಪಾದನೆ 4.6% ಮತ್ತು ವಿದ್ಯುತ್ ಉತ್ಪಾದನೆ 11.6% ಏರಿಕೆಯಾಗಿತ್ತು.
ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಭಾರತದ ಕೈಗಾರಿಕಾ ಉತ್ಪಾದನೆ 7% ಏರಿಕೆಯಾಗಿದೆ. 14 ಆರ್ಥಿಕ ತಜ್ಞರ ನಿರೀಕ್ಷೆ ಪ್ರಕಾರ ಐಐಪಿ ಬೆಳವಣಿಗೆ 2.3% ಮಟ್ಟದಲ್ಲಿ ಇರಬೇಕಿತ್ತು. ಹೀಗಾಗಿ ನಿರೀಕ್ಷೆ ಮೀರಿ ಪ್ರಗತಿ ದಾಖಲಾಗಿದೆ.