Site icon Vistara News

Inflation | ಹಣದುಬ್ಬರ ಮಾರ್ಚ್‌ ವೇಳೆಗೆ 6%ಕ್ಕಿಂತ ಇಳಿಕೆಯಾಗುವ ನಿರೀಕ್ಷೆ

inflation

ನವ ದೆಹಲಿ: ಮುಂದಿನ ವರ್ಷ ಮಾರ್ಚ್‌ ವೇಳೆಗೆ ಚಿಲ್ಲರೆ ಹಣದುಬ್ಬರ (Inflation) ಶೇ.೬ಕ್ಕಿಂತ ಕೆಳಕ್ಕೆ ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಹಣದುಬ್ಬರ ನಿಯಂತ್ರಣದ ಸಲುವಾಗಿ ಆರ್‌ಬಿಐ ಡಿಸೆಂಬರ್‌ ಒಳಗೆ ರೆಪೊ ದರದಲ್ಲಿ ಮತ್ತೆ ೦.೫೦%ರಿಂದ ೦.೬೦% ತನಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಆರ್‌ಬಿಐ ತನ್ನ ರೆಪೊ ದರವನ್ನು ಡಿಸೆಂಬರ್‌ ಒಳಗಾಗಿ ೫.೯%ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಎರಡು ಹಂತಗಳಲ್ಲಿ ೦.೨೫% ರಷ್ಟು ರೆಪೊ ದರ ಏರಿಕೆ ನಿರೀಕ್ಷಿಸಲಾಗಿದೆ ಎಂದು ಬಾರ್ಕ್ಲೇಸ್‌ ಸಂಸ್ಥೆಯ ಆರ್ಥಿಕ ತಜ್ಞ ರಾಹುಲ್‌ ಬಜೋರಿಯಾ ತಿಳಿಸಿದ್ದಾರೆ. ಕಳೆದ ಮೇನಿಂದ ಆರ್‌ಬಿಐ ರೆಪೊ ದರದಲ್ಲಿ ಒಟ್ಟು ೧.೪೦% ಏರಿಕೆ ಮಾಡಿದೆ. ಚಿಲ್ಲರೆ ಹಣದುಬ್ಬರ ಜೂನ್‌ನಲ್ಲಿ ೭.೦೧% ಇತ್ತು. ಆರ್‌ಬಿಐ ಪ್ರಕಾರ ಚಿಲ್ಲರೆ ಹಣದುಬ್ಬರ ಶೇ.೬ಕ್ಕಿಂತ ಕೆಳಕ್ಕಿದ್ದರೆ ಸುರಕ್ಷತೆಯ ಮಟ್ಟವಾಗಿದೆ.

Exit mobile version