ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2024ರಲ್ಲಿ ಹಣದುಬ್ಬರವನ್ನು (Inflation) 4% ರ ಸುರಕ್ಷಿತ ಮಟ್ಟಕ್ಕೆ ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ. ಹಾಗೂ ಈ ನಿಟ್ಟಿನಲ್ಲಿ ತನ್ನ ಹಣಕಾಸು ನೀತಿಗಳನ್ನು ರಚಿಸಲಿದೆ ಎಂದು ವರದಿಯಾಗಿದೆ.
ಆರ್‌ಬಿಐ ಪ್ರಕಾರ ಹಣದುಬ್ಬರ ಶೇ.4ಕ್ಕಿಂತ 2% ಹೆಚ್ಚು ಅಥವಾ ಕಡಿಮೆ ಮಟ್ಟದಲ್ಲಿ ಇದ್ದರೆ ಅದು ಸುರಕ್ಷಿತ. ಆರ್‌ಬಿಐನ ಆದ್ಯತೆ ಹಣದುಬ್ಬರವನ್ನು ಸುರಕ್ಷತಾ ಮಟ್ಟಕ್ಕೆ ಇಳಿಸುವುದು ಎಂದು ಅದರ ಇತ್ತೀಚಿನ ಬುಲೆಟಿನ್ ತಿಳಿಸಿದೆ.
ಕಳೆದ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.5.72%ರಷ್ಟಿತ್ತು. ಸತತ ಎರಡನೇ ತಿಂಗಳಿಗೆ ಶೇ.6ಕ್ಕಿಂತ ಕೆಳಕ್ಕೆ ಇಳಿದಿತ್ತು. ಅಮೆರಿಕ, ಯುರೋಪ್‌ನಲ್ಲೂ ಡಿಸೆಂಬರ್‌ನಲ್ಲಿ ಹಣದುಬ್ಬರ ಇಳಿಮುಖವಾಗುವ ಲಕ್ಷಣ ತೋರಿಸಿದೆ.