ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ (Infosys) ಜುಲೈ-ಸೆಪ್ಟೆಂಬರ್ ತ್ರೈಮಸಿಕ ಅವಧಿಗೆ 65% ವೆರಿಯೆಬಲ್ ಪೇ ವಿತರಿಸುವುದಾಗಿ ಘೋಷಿಸಿದೆ.
ಈ ವೆರಿಯೆಬಲ್ ಪೇ ಅರ್ಹ ಉದ್ಯೋಗಿಗಳಿಗೆ ನವೆಂಬರ್ ತಿಂಗಳಿನ ಸಂಬಳದಲ್ಲಿ ಸಿಗಲಿದೆ ಎಂದು ಇ-ಮೇಲ್ ಮೂಲಕ ತಿಳಿಸಲಾಗಿದೆ.
ಕಂಪನಿಯ J4, J5, J6 ಶ್ರೇಣಿಯಲ್ಲಿನ ಉದ್ಯೋಗಿಗಳಿಗೆ 60%-65% ವೆರಿಯೆಬಲ್ ಪೇ ವಿತರಣೆಯಾಗುವ ನಿರೀಕ್ಷೆ ಇದೆ. ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ನ ಆದೈ 23.4% ಏರಿಕೆಯಾಗಿತ್ತು. ಅಂದರೆ 36,538 ಕೋಟಿ ರೂ.ಗೆ ಹೆಚ್ಚಳವಾಗಿತ್ತು.