ನವ ದೆಹಲಿ: ಇನ್ಫೋಸಿಸ್ (Infosys) ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಘೋಷಿಸಿದೆ. ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುವ ಉದ್ಯೋಗಿಗಳಿಗೆ 25% ತನಕ ವೇತನ ಹೆಚ್ಚಳವನ್ನು ಪ್ರಕಟಿಸಿದೆ. ಬಹುತೇಕ ಇತರ ಉದ್ಯೋಗಿಗಳಿಗೆ 10-13% ವೇತನ ಏರಿಕೆಯಾಗಲಿದೆ. ದೀಪಾವಳಿ ಸಮೀಪಿಸುತ್ತಿರುವ ವೇಳೆಗೆ ಇನ್ಫಿ ಸಿಬ್ಬಂದಿಗೆ ಸಂತಸದ ಸುದ್ದಿ ಇದಾಗಿದೆ.
ಹೀಗಿದ್ದರೂ, ಉದ್ಯೋಗಿಯ ದರ್ಜೆಯನ್ನು ಆಧರಿಸಿ ವೇತನ ಪರಿಷ್ಕರಣೆ ಆಗುತ್ತಿದೆ. ಇದರೊಂದಿಗೆ ಟಿಸಿಎಸ್, ಇನ್ಫೋಸಿಸ್, ವಿಪ್ರೊದಲ್ಲಿ ವೇತನ ಪರಿಷ್ಕರಣೆ ಪ್ರಕ್ರಿಯೆ ನಡೆದಂತಾಗಿದೆ. ಕಾಗ್ನಿಜೆಂಟ್‌ನಲ್ಲೂ 10% ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ. ಟಿಸಿಎಸ್ ಈ ಹಿಂದೆ 100% ವೆರಿಯೆಬಲ್ ಪೇ ಘೋಷಿಸಿತ್ತು.
ಉದ್ಯೋಗಿಗಳ ವಲಸೆ ಕಡಿಮೆಯಾಗಿರುವ ಬೆನ್ನಲ್ಲೇ ಇನ್ಫೋಸಿಸ್, ವೇತನ ಪರಿಷ್ಕರಣೆಯನ್ನು ಪ್ರಕಟಿಸಿದೆ. 2021ರಲ್ಲಿ ಕಂಪನಿಯು ಜನವರಿ ಮತ್ತು ಜುಲೈನಲ್ಲಿ ವೇತನ ಏರಿಸಿತ್ತು.