Site icon Vistara News

ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್ ಪುತ್ರ, ಸೊಸೆಯಿಂದ 435 ಕೋಟಿ ರೂ. ಷೇರ್ ಮಾರಾಟ!

7.3 percent decline in Infosys net profit, 1.3 percent increase in revenue

ಮುಂಬೈ: ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಎಸ್‌ಡಿ ಶಿಬುಲಾಲ್ (SD Shibulal) ಅವರ ಪುತ್ರ ಶ್ರೇಯಸ್ ಶಿಬುಲಾಲ್ (Shreyas Shibulal) ಮತ್ತು ಸೊಸೆ ಭೈರವಿ ಮಧುಸೂಧನ್ ಶಿಬುಲಾಲ್ (Bhairavi Madhusudhan Shibulal) ಅವರು ತಮ್ಮ ಪಾಲಿನ ಇನ್ಫೋಸಿಸ್ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಕ್ಟೋಬರ್ 19ರಂದು ಮುಕ್ತ ಮಾರುಕಟ್ಟೆಯಲ್ಲಿ 435 ಕೋಟಿ ರೂ. ಮೌಲ್ಯ ಇನ್ಫಿ ಷೇರ್‌ಗಳನ್ನು (Infosys Shares) ಮಾರಿದ್ದಾರೆ ಎಂದು ಇನ್ಫೋಸಿಸ್ ಷೇರುಪೇಟೆಗೆ ತಿಳಿಸಿದೆ.

ಷೇರು ಪೇಟೆ ವಿನಿಮಯದಲ್ಲಿರು ಮಾಹಿತಿಯ ಪ್ರಕಾರ, ಎಸ್‌ಡಿ ಶಿಬುಲಾಲ್ ಅವರ ಪುತ್ರ ಶ್ರೇಯಸ್ ಶಿಬುಲಾಲ್ ಅವರು 1,433.5168 ರೂ. ಮೌಲ್ಯದ 23,70,435 ಷೇರ್ ಮಾರಾಟ ಮಾಡಿದ್ದಾರೆ. ಅಂದರೆ, 339.80 ಕೋಟಿ ರೂ. ಮೌಲ್ಯದ ಷೇರುಗಳಾಗಿವೆ. ಈ ಷೇರುಗಳನ್ನು ಮಾರಾಟ ಮಾಡುವ ಮೊದಲು, ಶ್ರೇಯಸ್ ಶಿಬುಲಾಲ್ 2,37,04,350 ಷೇರುಗಳನ್ನು ಹೊಂದಿದ್ದರು, ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇಕಡಾ 0.64 ರಷ್ಟಿತ್ತು. ಈಗ, ಇನ್ಫೋಸಿಸ್‌ನಲ್ಲಿ ಷೇರುಗಳನ್ನು ಮಾರಾಟ ಮಾಡಿದ ನಂತರ, ಅವರ ಬಳಿ ಈಗ 2,13,33,915 ಇನ್ಫಿ ಷೇರ್ ಹೊಂದಿದ್ದಾರೆ. ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ 0.58 ಪ್ರತಿಶತವಾಗಿದೆ. ಇದರರ್ಥ, ಎಸ್‌ಡಿ ಶಿಬುಲಾಲ್ ಅವರ ಮಗ ಗುರುವಾರ ಭಾರತೀಯ ಐಟಿ ಮೇಜರ್‌ನಲ್ಲಿ ಶೇಕಡಾ 03.06 ರಷ್ಟು ಪಾಲನ್ನು ಮಾರಾ ಮಾಡಿದ್ದಾರೆ.

ಅದೇ ರೀತಿ, ಎಸ್‌ಡಿ ಶಿಬುಲಾಲ್ ಅವರ ಸೊಸೆ ಭೈರವಿ ಮಧುಸೂಧನ್ ಶಿಬುಲಾಲ್ ಅವರು 6,67,924 ಇನ್ಫೋಸಿಸ್ ಷೇರುಗಳನ್ನು ಪ್ರತಿ ಷೇರಿಗೆ 1,432.9691 ರೂ.ನಂತೆ 95.71 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಈ ಇನ್ಫಿ ಷೇರುಗಳನ್ನು ಮಾರಾಟ ಮಾಡುವ ಮೊದಲ ಅವರ ಬಳಿ 66,79,240 ಷೇರುಗಳು ಇದ್ದವು. ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇಕಡಾ 0.18 ಆಗಿತ್ತು. 95.71 ಕೋಟಿ ರೂ. ಮೌಲ್ಯದ ಇನ್ಫೋಸಿಸ್ ಷೇರುಗಳನ್ನು ಮಾರಿದ ಬಳಿಕ ಅವರ ಬಳಿ ಈಘ 60,11,316 ಷೇರುಗಳನ್ನು ಅಥವಾ ಕಂಪನಿಯಲ್ಲಿ 0.16 ರಷ್ಟು ಪಾಲನ್ನು ಹೊಂದಿದ್ದಾರೆ. ಅಂದರೆ, ಎಸ್‌ಡಿ ಶಿಬುಲಾಲ್ ಅವರ ಸೊಸೆ ಇನ್ಫೋಸಿಸ್‌ನಲ್ಲಿ ಶೇಕಡಾ 0.02 ರಷ್ಟು ಪಾಲನ್ನು ಮಾರಿದ್ದಾರೆ ಎಂದರ್ಥ.

ಈ ಸುದ್ದಿಯನ್ನೂ ಓದಿ: ಈ ವರ್ಷ ಇನ್ಫೋಸಿಸ್‌ನಿಂದ ಕ್ಯಾಂಪಸ್ ನೇಮಕಾತಿ ಇಲ್ಲ! ಎಂಜಿನಿಯರ್ಸ್‌ಗೆ ನಿರಾಸೆ

ಒಟ್ಟಾರೆಯಾಗಿ ಶಿಬುಲಾಲ್ ಅವರ ಮಗಳು ಮತ್ತು ಸೊಸೆ 435 ಕೋಟಿ ರೂ. ಮೌಲ್ಯದ ಷೇರುಗಳನ್ನು ಗುರುವಾರ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಷೇರು ಪೇಟೆ ವಿನಿಮಯಕ್ಕೆ ತಿಳಿಸಲಾಗಿದೆ.

ಇನ್ಫೋಸಿಸ್ ಸಹ-ಸಂಸ್ಥಾಪಕರು ಸ್ವತಃ 58,14,733 ಇನ್ಫೋಸಿಸ್ ಷೇರುಗಳನ್ನು ಹೊಂದಿದ್ದಾರೆ, ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇಕಡಾ 0.16 ಆಗಿದೆ. ಅದೇ ರೀತಿ, ಸೆಪ್ಟೆಂಬರ್ 30, 2023 ರಂತೆ, ಶಿಬುಲಾಲ್ ಅವರ ಪತ್ನಿ ಕುಮಾರಿ ಶಿಬುಲಾಲ್ ಅವರು 52,48,965 ಷೇರುಗಳನ್ನು ಹೊಂದಿದ್ದಾರೆ ಅಥವಾ ಕಂಪನಿಯಲ್ಲಿ 1.14 ಶೇಕಡಾ ಪಾಲನ್ನು ಹೊಂದಿದ್ದಾರೆ ಎಂದು ಹೇಳಬಹುದು.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version