Site icon Vistara News

Infosys | ಇನ್ಫೋಸಿಸ್‌ನಲ್ಲಿ ಮನೆಯಿಂದಲೇ ಕೆಲಸ ಅಂತ್ಯ, ಕಚೇರಿಗೆ ಮರಳಲು ಟೆಕ್ಕಿಗಳಿಗೆ ಸೂಚನೆ

Infoysis

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್‌ನಲ್ಲಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ಧತಿ ನೀತಿಯನ್ನು ( work from home) ಅಂತ್ಯಗೊಳಿಸಲಾಗುತ್ತಿದೆ. ಟೆಕ್ಕಿಗಳಿಗೆ ಕಚೇರಿಗೆ ಮರಳುವಂತೆ ಸೂಚಿಸಲಾಗಿದೆ. ಒಟ್ಟು ಮೂರು ಹಂತಗಳಲ್ಲಿ ವರ್ಕ್‌ ಫ್ರಮ್‌ ಆಫೀಸ್‌ ಯೋಜನೆಯನ್ನು ಜಾರಿಗೊಳಿಸಲು ಕಂಪನಿ ಉದ್ದೇಶಿಸಿದೆ.

ಮೊದಲ ಹಂತದಲ್ಲಿ ಉದ್ಯೋಗಿಗಳಿಗೆ ವಾರಕ್ಕೆ ಎರಡು ಸಲ ಕಚೇರಿಗೆ ಬರಲು ಸೂಚಿಸಲಾಗಿದೆ. ಬಳಿಕ ಅವರನ್ನು ಅವರ ಆಯ್ಕೆಯ ಕಚೇರಿಗೆ ನಿಯುಕ್ತಿ ಮಾಡಲಾಗುವುದು. ಕೊನೆಗೆ ಹೈಬ್ರಿಡ್‌ ಮಾದರಿಯ ಕೆಲಸದ ಪದ್ಧತಿ ಜಾರಿಗೆ ತರಲು ಉದ್ದೇಶಿಸಿದೆ. ಅಂದರೆ ಮನೆ ಹಾಗೂ ಕಚೇರಿ ಎರಡೂ ಕೆಲಸಗಳ ಸಂಯೋಜನೆಯನ್ನು ಅಳವಡಿಸುವ ಸಾಧ್ಯತೆ ಇದೆ.

ಕೆಲಸದ ಪದ್ಧತಿ ವಿಷಯದಲ್ಲಿ ಉದ್ಯೋಗಿಗಳ ಹಿತಾಸಕ್ತಿಗೆ ಆದ್ಯತೆ ನೀಡಲಾಗುವುದು ಎಂದು ಕಂಪನಿಯ ಸಿಇಒ ಸಲೀಲ್‌ ಪರೇಖ್‌ ಇತ್ತೀಚೆಗೆ ಹೇಳಿದ್ದರು.

Exit mobile version