Site icon Vistara News

Infosys founder | ಇನ್ಫೋಸಿಸ್‌ ಸ್ಥಾಪಕರ ಮಕ್ಕಳಿಗೆ ಪ್ರಮುಖ ಹುದ್ದೆಗಳನ್ನು ನಿರಾಕರಿಸಿ ತಪ್ಪು ಮಾಡಿದೆ: ನಾರಾಯಣ ಮೂರ್ತಿ

Narayana Murthy

Narayana Murthy reacts to being asked how AI will hurt job prospects

ಬೆಂಗಳೂರು: ಇನ್ಫೋಸಿಸ್‌ನಲ್ಲಿ ಕಂಪನಿಯ ಸ್ಥಾಪಕರ ಮಕ್ಕಳಿಗೆ ಆಯಕಟ್ಟಿನ ಪ್ರಮುಖ ಹುದ್ದೆಗಳನ್ನು ನಿರಾಕರಿಸಿ ನಾನು ತಪ್ಪು ಮಾಡಿದೆ ಎಂದು ಇನ್ಫೋಸಿಸ್‌ ಸ್ಥಾಪಕ ಎನ್ ಆರ್‌ ನಾರಾಯಣ ಮೂರ್ತಿ ಬಹಿರಂಗವಾಗಿ (Infosys founder) ವಿಷಾದ ವ್ಯಕ್ತಪಡಿಸಿದ್ದಾರೆ.

ಇನ್ಫೋಸಿಸ್‌ನಲ್ಲಿ ಕಂಪನಿಯ ಸ್ಥಾಪಕರ ಮಕ್ಕಳೇ ಪ್ರಮುಖ ಹುದ್ದೆಗಳಲ್ಲಿ ಇರಕೂಡದು ಎಂಬುದು ನನ್ನ ಹಳೆಯ ನಂಬಿಕೆ ಆಗಿತ್ತು. ಇದರಿಂದಾಗಿ ಸ್ಥಾಪಕರ ಮಕ್ಕಳು ಕಂಪನಿಯ ನಿರ್ಣಾಯಕ ಹುದ್ದೆಗಳಿಂದ ದೂರ ಉಳಿಯುವಂತಾಯಿತು. ಈಗ ಅದು ನನ್ನ ತಪ್ಪು ನಿರ್ಧಾರವಾಗಿತ್ತು ಎಂಬುದು ಮನವರಿಕೆಯಾಗಿದೆ ಎಂದು ಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್‌ಗೆ ನಾರಾಯಣ ಮೂರ್ತಿ ಸ್ಥಾಪಕರಾಗಿದ್ದರೆ, ಇತರ ಆರು ಮಂದಿ ಸಹ ಸಂಸ್ಥಾಪಕರಿದ್ದಾರೆ.

ಇನ್ಫೋಸಿಸ್‌ ಅತ್ಯಂತ ವೃತ್ತಿಪರವಾಗಿ ಬೆಳೆಯಬೇಕು ಎಂಬುದು ನನ್ನ ನಂಬಿಕೆಯಾಗಿತ್ತು. ಹೀಗಾಗಿ ಕಂಪನಿಯ ಸ್ಥಾಪಕರ ಮಕ್ಕಳು ಪ್ರಮುಖ ಹುದ್ದೆಗಳಲ್ಲಿ ಇರಕೂಡದು ಎಂದು ಭಾವಿಸಿದ್ದೆ. ಯಾರಾದರೂ ಅನರ್ಹ ವ್ಯಕ್ತಿಯನ್ನು ಪ್ರಮುಖ ಹುದ್ದೆಗೆ ನೇಮಿಸಬಹುದು ಎಂಬ ಕಳವಳ ಆಗ ನನ್ನಲ್ಲಿತ್ತು. ಆದರೆ ಅದು ತಪ್ಪು ಭಾವನೆ. ಯಾರೇ ಆಗಲಿ, ಪ್ರತಿಭಾವಂತರಿಗೆ ಅವಕಾಶ ನೀಡಬೇಕು. ಒಳ್ಳೆಯ ವ್ಯಕ್ತಿಗೆ ಒಳ್ಳೆಯ ಹುದ್ದೆ ಪಡೆಯುವ ಅವಕಾಶವನ್ನು ನಿರಾಕರಿಸಬಾರದು. ಪ್ರತಿಭಾವಂತ ಅಭ್ಯರ್ಥಿಯಾಗಿದ್ದರೆ, ಹುದ್ದೆ ನೀಡುವಾಗ ಆತನ ರಾಷ್ಟ್ರೀಯತೆ, ಕುಟುಂಬ ಮುಖ್ಯವಾಗುವುದಿಲ್ಲ ಎಂದು ನಾರಾಯಣ ಮೂರ್ತಿ ವಿವರಿಸಿದರು.

ಇನ್ಫೋಸಿಸ್‌ಗೆ 40 ವರ್ಷ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ಫೋಸಿಸ್‌ನ ಸ್ಥಾಪಕರು: ಎನ್. ಆರ್‌ ನಾರಾಯಣ ಮೂರ್ತಿ. ಸಹ ಸಂಸ್ಥಾಪಕರು: ನಂದನ್‌ ನಿಲೇಕಣಿ, ಎಸ್.‌ ಗೋಪಾಲಕೃಷ್ಣನ್‌, ಎಸ್.ಡಿ ಶಿಬುಲಾಲ್‌, ಕೆ. ದಿನೇಶ್‌, ಎನ್.ಎಸ್ ರಾಘವನ್‌,‌ ಅಶೋಕ್‌ ಅರೋರಾ.

ಇನ್ಫೋಸಿಸ್‌ನ ಮುಂದಿನ ಸಾರಥ್ಯ ಸ್ಥಾಪಕೇತರರಿಗೆ ಸಂಭವ:

ಇನ್ಫೋಸಿಸ್‌ನ ಭವಿಷ್ಯದ ಸಾರಥ್ಯ ಸ್ಥಾಪಕೇತರರಿಗೆ ಹಸ್ತಾಂತರವಾಗಲಿದೆ ಎಂದು ಕಾರ್ಯಕಾರಿಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ತಿಳಿಸಿದ್ದಾರೆ. ಸ್ಥಾಪಕರ ಪೈಕಿ ನಾನೇ ಕೊನೆಯದಾಗಿ ಉನ್ನತ ಹುದ್ದೆಯಿಂದ ನಿರ್ಗಮಿಸುವವನಿದ್ದೇನೆ.

Exit mobile version