Site icon Vistara News

Infosys | ಇನ್ಫೋಸಿಸ್‌ಗೆ 6,586 ಕೋಟಿ ರೂ. ತ್ರೈಮಾಸಿಕ ನಿವ್ವಳ ಲಾಭ, 13% ಹೆಚ್ಚಳ

infosys

ನವ ದೆಹಲಿ: ಐಟಿ ದಿಗ್ಗಜ ಇನ್ಫೋಸಿಸ್‌ (Infosys ) ಗುರುವಾರ ಮೂರನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ್ದು, ಅಕ್ಟೋಬರ್-ಡಿಸೆಂಬರ್‌ ಅವಧಿಯಲ್ಲಿ 6,586 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2021-22ರ ಇದೇ ಅವಧಿಯಲ್ಲಿ 5,809 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ನಿರೀಕ್ಷೆಗೂ ಮೀರಿ ಇನ್ಫೋಸಿಸ್‌ ಲಾಭ ಮತ್ತು ಆದಾಯವನ್ನು ಗಳಿಸಿದೆ. ಬಹುತೇಕ ಎಲ್ಲ ವಲಯಗಳಲ್ಲಿ ಇನ್ಫೋಸಿಸ್‌ ಉತ್ತಮ ವಹಿವಾಟು ನಡೆಸಿದೆ. 38,318 ಕೋಟಿ ರೂ. ಆದಾಯ ಗಳಿಸಿದ್ದು, 20% ಲಾಭ ಗಳಿಸಿದೆ.

ಇನ್ಫೋಸಿಸ್‌ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ 3.3 ಶತಕೋಟಿ ಡಾಲರ್‌ (24,543 ಕೋಟಿ ರೂ.) ಮೊತ್ತದ ಡೀಲ್‌ಗೆ ಸಹಿ ಹಾಕಿತ್ತು. ಕಂಪನಿಯ ಹೊಸ ಗ್ರಾಹಕರ ಸಂಖ್ಯೆ 134ಕ್ಕೆ ಏರಿತ್ತು.

Exit mobile version