Site icon Vistara News

Infosys | Moonlighting | ಎರಡೆರಡು ಕಡೆ ಕೆಲಸ ಮಾಡಿದ ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್

Infoysis

ಬೆಂಗಳೂರು: ವಿಪ್ರೊ ಬಳಿಕ ಇನ್ಫೋಸಿಸ್‌ (Infosys) ಮೂನ್‌ಲೈಟಿಂಗ್‌ (Moonlighting ) ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಕಳೆದ 12 ತಿಂಗಳುಗಳಲ್ಲಿ ಏಕಕಾಲಕ್ಕೆ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌ ತಿಳಿಸಿದ್ದಾರೆ.

” ಮೂನ್‌ಲೈಟಿಂಗ್‌ ಪರಿಕಲ್ಪನೆಗೆ ಇನ್ಫೋಸಿಸ್‌ ಸಂಪೂರ್ಣ ವಿರೋಧಿಸುತ್ತದೆ. ಹೀಗಿದ್ದರೂ, ಅರೆ ಕಾಲಿಕ ಉದ್ಯೋಗಿಗಳಿಗೆ ಕಂಪನಿ ಬೆಂಬಲ ನೀಡುತ್ತದೆʼʼ ಎಂದು ತಿಳಿಸಿದರು. ವಿಪ್ರೊ ಕೂಡ ಉದ್ಯೋಗಿಗಳನ್ನು ಮೂನ್‌ಲೈಟಿಂಗ್‌ ನಡೆಸಿದ್ದಕ್ಕಾಗಿ ವಜಾಗೊಳಿಸಿತ್ತು. ಟಿಸಿಎಸ್‌ ಕೂಡ ಈ ಪದ್ಧತಿಯನ್ನು ವಿರೋಧಿಸಿದೆ.

ಇದನ್ನೂ ಓದಿ: Infosys | ಟೆಕ್ಕಿಗಳಿಗೆ ಕಚೇರಿ ಕೆಲಸ ಕಡ್ಡಾಯವಲ್ಲ: ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್

Exit mobile version