ಬೆಂಗಳೂರು: ಇನ್ಫೋಸಿಸ್ ಟೆಕ್ನಾಲಜೀಸ್ ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆಯನ್ನು ( Infosys) ವ್ಯಾಪಕವಾಗಿ ವಿಸ್ತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ೫ ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಲೀಸ್‌ಗೆ ಖರೀದಿಸಿದೆ. (ಸುಮಾರು ೧೧.೫೦ ಎಕರೆ)
ಬೆಂಗಳೂರು ನಗರದಲ್ಲಿ ಇತ್ತೀಚಿನ ಅವಧಿಯಲ್ಲಿಯೇ ಬಹು ದೊಡ್ಡ ಕಚೇರಿ ಸ್ಥಳದ ಡೀಲ್ ಇದಾಗಿದೆ. ಪ್ರತಿ ಚದರ ಅಡಿಗೆ ೫೧ ರೂ.ಬಾಡಿಗೆಯನ್ನು ಇನ್ಫೋಸಿಸ್ ನೀಡಲಿದೆ. ಲೀಸ್‌ನ ಅವಧಿ ಒಟ್ಟು ೧೫ ವರ್ಷಗಳಾಗಿದೆ.
ಇನ್ಫೋಸಿಸ್ ಕಳೆದ ಏಪ್ರಿಲ್-ಜೂನ್ ಅವಧಿಗೆ ಉದ್ಯೋಗಿಗಳಿಗೆ ನೀಡುವ ವೆರಿಯೆಬಲ್ ಪೇಯಲ್ಲಿ ೩೦ ಪರ್ಸೆಂಟ್ ಕಡಿತಗೊಳಿಸಿತ್ತು.
ಇದನ್ನೂ ಓದಿ: Infosys | ಇನ್ಫೋಸಿಸ್ ಟೆಕ್ಕಿಗಳ ವೆರಿಯೆಬಲ್ ಪೇ 70%ಕ್ಕೆ ಕಡಿತ, ಲಾಭಾಂಶ ಇಳಿಕೆ ಎಫೆಕ್ಟ್