Site icon Vistara News

Infosys Prize 2022 | ಸಾಧಕರಿಗೆ 81 ಲಕ್ಷ ರೂ.ಗಳ ಇನ್ಫೋಸಿಸ್‌ ಬಹುಮಾನ ಪ್ರಕಟ

infosys

ಬೆಂಗಳೂರು: ಇನ್ಫೋಸಿಸ್‌ ಸೈನ್ಸ್‌ ಫೌಂಡೇಷನ್‌ 2022ರ ಇನ್ಫೋಸಿಸ್‌ ಬಹುಮಾನವನ್ನು ಮಂಗಳವಾರ ಘೋಷಿಸಿದೆ. (Infosys Prize 2022) ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ವಿಜ್ಞಾನ, ಮಾನವಿಕ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಲಯದ ಸಾಧಕರಿಗೆ 1 ಲಕ್ಷ ಡಾಲರ್‌ ಮೌಲ್ಯದ ( ಅಂದಾಜು 81 ಲಕ್ಷ ರೂ.) ಈ ಬಹುಮಾನವನ್ನು ಪ್ರಕಟಿಸಲಾಗಿದೆ.

ಇನ್ಫೋಸಿಸ್‌ ಬಹುಮಾನ ವಿಜೇತರ ವಿವರ ಇಂತಿದೆ: ಎಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್- ಸುಮನ್‌ ಚಕ್ರವರ್ತಿ, ಮಾನವಿಕ-ಸುಧೀರ್‌ ಕೃಷ್ಣಸ್ವಾಮಿ, ಜೀವ ವಿಜ್ಞಾನ-ವಿದಿತಾ ವೈದ್ಯ, ಗಣಿತ ವಿಜ್ಞಾನ-ಮಹೇಶ್‌ ಕಾಕಡೆ, ಭೌತ ವಿಜ್ಞಾನ-ನಿಸ್ಸಿಮ್‌ ಕಾನೆಕರ್‌, ಸಮಾಜ ವಿಜ್ಞಾನ-ರೋಹಿಣಿ ಪಾಂಡೆ.

ಈ ಸಲ ಒಟ್ಟು 218 ನಾಮ ನಿರ್ದೇಶನಗಳು ಬಂದಿತ್ತು. ವಿಶ್ವದ ಹೆಸರಾಂತ ತಜ್ಞರು ವಿಜೇತರನ್ನು ಆಯ್ಕೆ ಮಾಡಿದ್ದಾರೆ ಎಂದು ಇನ್ಫೋಸಿಸ್‌ ತಿಳಿಸಿದೆ.

Exit mobile version