ನವ ದೆಹಲಿ: ಜೀವ ವಿಮೆ ಕಂಪನಿಗಳು ೨೦೨೧-೨೨ರಲ್ಲಿ 15.87 ಲಕ್ಷ ಪಾಲಿಸಿಗಳನ್ನು ಇತ್ಯರ್ಥಪಡಿಸಿದ್ದು, 45,817 ಕೋಟಿ ರೂ. ಡೆತ್ ಕ್ಲೇಮ್ ಮಾಡಿವೆ ಎಂದು ಐಆರ್‌ಡಿಎ (Insurance Policies) ವಾರ್ಷಿಕ ವರದಿ ತಿಳಿಸಿದೆ.
ಡೆತ್ ಕ್ಲೇಮ್‌ನಲ್ಲಿ ಹೆಚ್ಚಿನ ಪ್ರಕರಣಗಳು ಕೋವಿಡ್ ಸೋಂಕು ತಗುಲಿ ಸಾವು ಸಂಭವಿಸಿ ಆಗಿವೆ ಎಂದು ವರದಿ ತಿಳಿಸಿದೆ. 2020-21ರಲ್ಲಿ 10.83 ಲಕ್ಷ ಪಾಲಿಸಿಗಳನ್ನು ಇತ್ಯರ್ಥಪಡಿಸಲಾಗಿತ್ತು. 26,421 ಕೋಟಿ ರೂ. ಡೆತ್ ಕ್ಲೇಮ್ ಮಾಡಿಕೊಳ್ಳಲಾಗಿತ್ತು. ಮತ್ತೊಂದು ಕಡೆ ಆರೋಗ್ಯ ವಿಮೆ ಕ್ಲೇಮ್ ಸಲುವಾಗಿ 41,631 ಕೋಟಿ ರೂ.ಗಳನ್ನು ವಿತರಿಸಿವೆ.
ಜೀವ ವಿಮೆ ನಿಗಮ (LIC) ಭಾರತದ ಅತಿ ದೊಡ್ಡ ಜೀವ ವಿಮೆ ಸಂಸ್ಥೆಯಾಗಿದೆ. ಇದು 2021-22ರಲ್ಲಿ 13.49 ಲಕ್ಷ ಪಾಲಿಸಿಗಳನ್ನು (ಡೆತ್ ಕ್ಲೇಮ್) ಇತ್ಯರ್ಥಪಡಿಸಿದೆ. 28,408 ಕೋಟಿ ರೂ.ಗಳನ್ನು ವಿಮೆ ಪರಿಹಾರವಾಗಿ ನೀಡಿದೆ. ಐಸಿಐಸಿಐ ಲ್ಯಾಂಬೋರ್ಡ್ 2,977 ಕೋಟಿ ರೂ, ಎಚ್‌ಡಿಎಫ್‌ಸಿ ಲೈಫ್ 2,608 ಕೋಟಿ ರೂ. ವಿಮೆ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದೆ.
ಎಲ್‌ಐಸಿಯ ಒಟ್ಟಾರೆ ಕ್ಲೇಮ್ ಸೆಟ್ಲ್‌ಮೆಂಟ್ ಅನುಪಾತವು 96.02% ಆಗಿದೆ. ಖಾಸಗಿ ವಿಮೆ ಕಂಪನಿಗಳ ಕ್ಲೇಮ್ ಸೆಟ್ಲ್‌ಮೆಂಟ್ ಅನುಪಾತವು 94.13% ಆಗಿದೆ.