Site icon Vistara News

ವಿಸ್ತಾರ Money Guide | ಈ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳಿಗೆ 7.4% ತನಕ ಬಡ್ಡಿದರ

fd rate

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಳೆದ ಕೆಲವು ತಿಂಗಳುಗಳಲ್ಲಿ ರೆಪೊ ದರವನ್ನು ಏರಿಸಿದ ಬಳಿಕ ಹಲವಾರು ಬ್ಯಾಂಕ್‌ಗಳು (ವಿಸ್ತಾರ Money Guide) ಟ್ಯಾಕ್ಸ್-ಸೇವಿಂಗ್‌ ಫಿಕ್ಸೆಡ್‌ ಡಿಪಾಸಿಟ್‌ಗಳ ಬಡ್ಡಿ ದರವನ್ನು ಏರಿಸಿವೆ. ಶೇ.೭.೪ ತನಕವೂ ಬಡ್ಡಿ ಆದಾಯವನ್ನು ಪಡೆಯಲು ಅವಕಾಶ ಉಂಟಾಗಿದೆ. ಟ್ಯಾಕ್ಸ್‌ ಸೇವಿಂಗ್‌ ಡಿಪಾಸಿಟ್‌ಗಳಲ್ಲಿ ಹೂಡಿಕೆಯ ಮೇಲೆ ಆದಾಯ ತೆರಿಗೆ ಕಾಯಿದೆ ಅಡಿಯ ಸೆಕ್ಷನ್‌ ೮೦ ಸಿ ಅಡಿಯಲ್ಲಿ ತೆರಿಗೆ ಕಡಿತವನ್ನು ಕ್ಲೇಮ್‌ ಮಾಡಿಕೊಳ್ಳಬಹುದು.

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ತೆರಿಗೆ ಉಳಿತಾಯಕ್ಕೆ ಸಹಕರಿಸುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ೭.೪%ಕ್ಕೆ ಪರಿಷ್ಕರಿಸಲಾಗಿದೆ. ಹೀಗಾಗಿ ೧.೫ ಲಕ್ಷ ರೂ.ಗಳನ್ನು ಠೇವಣಿ ಇಟ್ಟರೆ, ಐದು ವರ್ಷಗಳಲ್ಲಿ ೨.೧೬ ಲಕ್ಷ ರೂ.ಗೆ ವೃದ್ಧಿಸಲಿದೆ.

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ಎಫ್.ಡಿ ಬಡ್ಡಿ ದರ ಇಂತಿದೆ. (೨ ಕೋಟಿ ರೂ.ಗಿಂತ ಕಡಿಮೆ ಮೊತ್ತ)

12 ತಿಂಗಳಿಗೆ7.20%
12 ತಿಂಗಳು 1 ದಿನದಿಂದ 15 ತಿಂಗಳಿಗೆ7.40%
15 ತಿಂಗಳು 1 ದಿನದಿಂದ 524 ದಿನಗಳಿಗೆ7.40%
75 ವಾರಗಳಿಗೆ7.70%
526 ದಿನಗಳಿಂದ 18 ತಿಂಗಳು7.40%
24 ತಿಂಗಳಿಗೆ7.30%
990 ದಿನಗಳು7.70%
42 ತಿಂಗಳು 1 ದಿನದಿಂದ 60 ತಿಂಗಳು7.40%

ಡೊಯಿಚ್‌ ಬ್ಯಾಂಕ್:‌ ( Deutsche Bank) ಡೊಯಿಚ್‌ ಬ್ಯಾಂಕ್‌ ತೆರಿಗೆ ಉಳಿತಾಯದ ಎಫ್‌.ಡಿಗಳಿಗೆ ೭% ಬಡ್ಡಿ ದರವನ್ನು ನೀಡುತ್ತದೆ. ಇಲ್ಲಿ ೧.೫ ಲಕ್ಷ ರೂ. ಹೂಡಿಕೆ ಮಾಡಿದರೆ, ೫ ವರ್ಷಗಳಲ್ಲಿ ೨.೧೨ ಲಕ್ಷ ರೂ.ಗೆ ಏರಿಕೆಯಾಗಲಿದೆ.

ಡೊಯಿಚ್‌ ಬ್ಯಾಂಕ್‌ನಲ್ಲಿ ೧ ವರ್ಷ ೧ ದಿನಕ್ಕೆ ಬಡ್ಡಿ ದರ ೬.೨೫% ಇದ್ದರೆ, ೩ ವರ್ಷ ೧ ದಿನಕ್ಕೆ ೭% ಬಡ್ಡಿ ಆದಾಯ ಸಿಗಲಿದೆ.

ಸರ್ವೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್:‌ ಸರ್ವೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಗೆ ೬.೭೫% ತನಕ ಬಡ್ಡಿ ಸಿಗಲಿದೆ. ೧.೫ ಲಕ್ಷ ರೂ. ಹೂಡಿದರೆ ೫ ವರ್ಷಗಳಲ್ಲಿ ೨.೧೦ ಲಕ್ಷ ರೂ. ಸಿಗಲಿದೆ.

ಡಿಸಿಬಿ ಬ್ಯಾಂಕ್:‌ ಡಿಸಿಬಿ ಬ್ಯಾಂಕ್‌ನಲ್ಲಿ ಟ್ಯಾಕ್ಸ್‌ ಸೇವಿಂಗ್‌ ನಿಶ್ಚಿತ ಠೇವಣಿಗೆ ೬.೬ % ಬಡ್ಡಿ ದರ ಸಿಗಲಿದೆ. ೧.೫ ಲಕ್ಷ ರೂ. ಹೂಡಿದರೆ ೫ ವರ್ಷಗಳಲ್ಲಿ ೨.೦೮ ಲಕ್ಷ ರೂ. ಆಗಲಿದೆ.

ಇಂಡಸ್ಇಂಡ್‌ ಬ್ಯಾಂಕ್:‌ ಇಂಡಸ್‌ಇಂಡ್‌ ಬ್ಯಾಂಕ್‌ ಫಿಕ್ಸೆಡ್‌ ಡಿಪಾಸಿಟ್‌ಗಳಿಗೆ ೬.೫% ಬಡ್ಡಿ ನೀಡುತ್ತದೆ. ೧.೫ ಲಕ್ಷ ರೂ. ಹೂಡಿದರೆ ೫ ವರ್ಷಗಳಲ್ಲಿ ೨.೦೭ ಲಕ್ಷ ರೂ.ಗೆ ಬೆಳೆಯುತ್ತದೆ.

Exit mobile version