ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಇತ್ತೀಚಿನ ದಾಖಲೆಯ ಮಟ್ಟದಿಂದ ೧೧೦ ಡಾಲರ್‌ಗೆ ಇಳಿಕೆಯಾಗಿದೆ.
ಪ್ರತಿ ಬ್ಯಾರೆಲ್‌ಗೆ ೧೨೩ ಡಾಲರ್ ಮಟ್ಟಕ್ಕೆ ಜಿಗಿದಿದ್ದ ಕಚ್ಚಾ ತೈಲ ದರ ಇದೀಗ ೧೧೦ ಡಾಲರ್‌ಗೆ ಇಳಿಮುಖವಾಗಿದೆ.
ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಏರಿಸಿರುವುದರಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಉಂಟಾಗಿದೆ. ಇದರ ಪರಿಣಾಮ ಕಚ್ಚಾ ತೈಲ ದರ ೧೧೦ ಡಾಲರ್‌ಗೆ ತಗ್ಗಿದೆ.
ಈ ನಡುವೆ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ ಒಪೆಕ್, ಕಚ್ಚಾ ತೈಲೋತ್ಪಾದನೆಯನ್ನು ಹೆಚ್ಚಿಸಲು ಸಮ್ಮತಿಸಿದೆ. ಜುಲೈ-ಆಗಸ್ಟ್‌ನಲ್ಲಿ ದಿನಕ್ಕೆ ೬೪೮,೦೦೦ ಬ್ಯಾರೆಲ್ ಉತ್ಪಾದನೆ ಹೆಚ್ಚಿಸುವ ನಿರೀಕ್ಷೆ ಇದೆ. ಇದರಿಂದ ಕಚ್ಚಾ ತೈಲ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
ಭಾರತ ಈ ನಡುವೆ ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಗಣನೀಯ ಹೆಚ್ಚಿಸಿದೆ. ರಷ್ಯ ಕೂಡ ಡಿಸ್ಕೌಂಟ್ ದರದಲ್ಲಿ ನೀಡಲು ಸಮ್ಮತಿಸಿದೆ.
ಇದನ್ನೂ ಓದಿ: ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರವಾಗಿ ಹೊರಹೊಮ್ಮಿದ ರಷ್ಯಾ