ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದು. (Money plus) ಈಕ್ವಿಟಿ ಮ್ಯೂಚುವಲ್ ಫಂಡ್‌ನಲ್ಲಿ ಕ್ವಾಂಟ್ ಸ್ಮಾಲ್ ಕ್ಯಾಪ್ ಫಂಡ್ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಿದೆ. ಈ ಕುರಿತ ವಿವರಗಳನ್ನು ವಿಸ್ತಾರ ಮನಿ ಪ್ಲಸ್‌ನಲ್ಲಿ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಆಗಿರುವ ಶರತ್ ಎಂ.ಎಸ್ ಅವರು ನೀಡಿದ್ದಾರೆ.
ಕ್ವಾಂಟ್ ಮ್ಯೂಚುವಲ್ ಫಂಡ್‌ನಲ್ಲಿ ಮುಂದಿನ ಹತ್ತು ವರ್ಷಗಳ ಕಾಲ ಪ್ರತಿ ತಿಂಗಳು 5,000 ರೂ. ಇನ್ವೆಸ್ಟ್ ಮಾಡಿದ್ರೆ, ಒಟ್ಟು ಹೂಡಿಕೆ 6 ಲಕ್ಷ ರೂ. ಆಗುತ್ತದೆ. ಲಾಭ 20 ಲಕ್ಷದ 90 ಸಾವಿರ ರೂ. ಆಗುತ್ತದೆ ಎಂಬುದನ್ನು ಇಟಿ ಮನಿಯ ವಿಶ್ಲೇಷಣೆ ತಿಳಿಸುತ್ತದೆ. ಒಂದು ವೇಳೆ ಇದೇ ದುಡ್ಡನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರೆ, ಅದು 8.6 ಲಕ್ಷ ರೂ. ಆಗಿರುತ್ತಿತ್ತು. ಚಿನ್ನದಲ್ಲಿ ಇಟ್ಟಿದ್ದರೆ ಅದು 9.86 ಲಕ್ಷ ರೂ.ಗೆ ಏರುತ್ತಿತ್ತು. ಈ ಕ್ವಾಂಟ್ ಮ್ಯೂಚುವಲ್ ಫಂಡ್ ಅಡಿಯಲ್ಲಿ ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ 70.8% ಹೂಡಿಕೆ ಮಾಡಲಾಗಿದೆ. ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ 21.97% ಇನ್ವೆಸ್ಟ್ ಮಾಡಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ವಿಸ್ತಾರ ಮನಿ ಪ್ಲಸ್ ವಿಡಿಯೊವನ್ನು ತಪ್ಪದೆ ವೀಕ್ಷಿಸಿ.