Site icon Vistara News

Invest Karnataka 2022 | ಜಾಗತಿಕ ಹೂಡಿಕೆದಾರರ ಸಮಾವೇಶ ಸಮಾರೋಪ, 10 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾಪ

assembly-session-marithibbegowda and murugesh nirani talk war

ಬೆಂಗಳೂರು: ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭ (Invest Karnataka 2022 ) ಶುಕ್ರವಾರ ನಡೆಯಿತು. ಈ ಸಲ ಒಟ್ಟು 10 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

ಐದು ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾಪಗಳು ಬರಬಹುದು ಎಂದು ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆ ಮೀರಿ 10 ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾಪಗಳು ಬಂದಿವೆ. ಯಾವ ಜಿಲ್ಲೆಗೆ ಎಷ್ಟು ಬಂಡವಾಳ, ಯಾವ ವಲಯದಲ್ಲಿ ಬಂಡವಾಳ ಎಂಬ ವಿವರಗಳನ್ನು ನಾಳೆ ನೀಡುತ್ತೇವೆ. ಬೆಂಗಳೂರಿನಲ್ಲಿ ಶೇ.70 ರಷ್ಟು ಬಂಡವಾಳ ಹೂಡಿಕೆಯಾಗಿದೆ ಎಂದರು.

ಕಳೆದ ಮೂರು ದಿನಗಳಿಂದ ಬಂಡವಾಳ ಹೂಡಿಕೆ ಸಮಾವೇಶ ಬಹಳ ಯಶಸ್ವಿಯಾಗಿ ನಡೆದಿದೆ. ಯಾವುದೇ ಉದ್ಯಮ ಮಾಡಲು ಅವರಿಗೆ ಸರ್ಕಾರ ಹಾಗೂ ರಾಜ್ಯದ ಮೇಲೆ ವಿಶ್ವಾಸ ಬರಬೇಕು. ಆಗ ಮಾತ್ರವೇ ಉದ್ಯಮ ಮುಂದುವರಿಯುತ್ತದೆ.

ಹೂಡಿಕೆಗೆ ಪೂರಕವಾದ ವಾತಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ಎಂಟು ವರ್ಷದಲ್ಲಿ ನಿರ್ಮಾಣ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಶ್ರಮದಿಂದ ಹೂಡಿಕೆ ಯಶಸ್ವಿಯಾಗಿದೆ. MOU ಪಡೆದ ಉದ್ಯಮಿಗಳು ಬೇಗ ಉದ್ಯಮ ಪ್ರಾರಂಭ ಮಾಡಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Exit mobile version