Site icon Vistara News

Invest Karnataka 2022 | ದೇಶದ ಮೊಟ್ಟ ಮೊದಲ ಗ್ರೀನ್‌ ಹೈಡ್ರೋಜನ್‌ ಘಟಕ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ

green hydrogen

ಬೆಂಗಳೂರು: ಮಂಗಳೂರಿನಲ್ಲಿ ದೇಶದ ಮೊಟ್ಟ ಮೊದಲ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌ (Green Hydrogen cluster) ಅಸ್ತಿತ್ವಕ್ಕೆ ಬರಲಿದೆ. 7 ಕಂಪನಿಗಳು ಒಟ್ಟು 2.91 ಲಕ್ಷ ಕೋಟಿ ರೂ.ಗಳ ಬೃಹತ್‌ ಹೂಡಿಕೆಯನ್ನು ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಮಾಡಲಿವೆ (Invest Karnataka 2022) ಎಂದು ಘೋಷಿಸಲಾಗಿದೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ವಿಷಯವನ್ನು ತಿಳಿಸಲಾಯಿತು. ಅದರ ಪ್ರಕಾರ ಜೆಎಸ್‌ಡಬ್ಲ್ಯು ಗ್ರೀನ್‌ ಎನರ್ಜಿ ಕಂಪನಿಯು ಗ್ರೀನ್‌ ಅಮೋನಿಯಾ ಘಟಕವನ್ನು 40,148 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಿದೆ.

ಮಂಗಳೂರಿನಲ್ಲಿ ಅಸ್ತಿತ್ವಕ್ಕೆ ಬರಲಿರುವ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌, ಸ್ಥಳೀಯ ಬೇಡಿಕೆಯನ್ನು ಪೂರೈಸುವುದಲ್ಲದೆ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ಯುರೋಪ್‌ಗೂ ರಫ್ತಾಗಲಿದೆ. ರಿನ್ಯೂ ಪವರ್‌ 50,000 ಕೋಟಿ ರೂ. ಹೂಡಿಕೆಯಲ್ಲಿ ಅಮೋನಿಯಾ ಘಟಕವನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಸಹಿ ಹಾಕಿದೆ. ಅವಧ ಎನರ್ಜಿ 45,000 ಕೋಟಿ ರೂ. ಹೂಡಿಕೆಯೊಂದಿಗೆ ಎಂಟಿಪಿಎ ಗ್ರೀನ್‌ ಅಮೋನಿಯಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿದೆ. ಎಸಿಎಂಇ ಸೋಲಾರ್‌ ಕೂಡ ಗ್ರೀನ್‌ ಅಮೋನಿಯಾ ಉತ್ಪಾದನೆಗೆ 51,000 ಕೋಟಿ ರೂ. ಹೂಡಿಕೆ ಮಾಡಲು ಎಂಒಯುಗೆ ಸಹಿ ಹಾಕಿದೆ. ಎಬಿಸಿ ಕ್ಲೀನ್‌ಟೆಕ್‌ ಕಂಪನಿಯು 50,000 ಕೋಟಿ ರೂ. ಹೂಡಿಕೆಯಲ್ಲಿ ಗ್ರೀನ್‌ ಅಮೋನಿಯಾ ಪ್ಲಾಂಟ್‌ ಸ್ಥಾಪನೆಗೆ ಉದ್ದೇಶಿಸಿದೆ.

ಮಲೇಷ್ಯಾ ಮೂಲದ ಪೆಟ್ರೊನಾಸ್‌ ಕಂಪನಿಯು 31,200 ಕೋಟಿ ರೂ. ಹೂಡಿಕೆಯಲ್ಲಿ 500 ಕೆಟಿಪಿಎ ಗ್ರೀನ್‌ ಅಮೋನಿಯಾ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸಲು ಎಂಒಯುಗೆ ಸಹಿ ಹಾಕಿದೆ.

Exit mobile version