Site icon Vistara News

Stock Market: ಸತತ 5ನೇ ದಿನವೂ ಷೇರು ಪೇಟೆ ಕುಸಿತ, ಹೂಡಿಕೆದಾರರಿಗೆ 15 ಲಕ್ಷ ಕೋಟಿ ರೂ. ನಷ್ಟ!

sensex

ಮುಂಬೈ: ಇಸ್ರೇಲ್-ಹಮಾಸ್ (Israel Palestine War) ನಡುವಿನ ಯುದ್ಧವು ಭಾರತೀಯ ಷೇರುಪೇಟೆಯ (Stock Market) ಮೇಲೂ ಪರಿಣಾಮ ಬೀರಿದೆ. ಸತತ ಐದು ದಿನದಿಂದ ಷೇರು ಪೇಟೆ ಕುಸಿತವನ್ನು ದಾಖಲಿಸಿದ್ದು, ಹೂಡಿಕೆದಾರರಿಗೆ 15 ಲಕ್ಷ ಕೋಟಿ (Loss to Investors) ರೂಪಾಯಿ ನಷ್ಟವಾಗಿದೆ. ಬುಧವಾರವೂ ನಿಫ್ಟಿ 50 (Nifty 50) ಮತ್ತು ಸೆನ್ಸೆಕ್ಸ್(Sensex) ಋಣಾತ್ಮಕವಾಗಿಯೇ ತನ್ನ ವ್ಯವಹಾರವನ್ನು ಮುಗಿಸಿತು. ಒಂದೆಡೆ ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮ, ಮತ್ತೊಂದೆಡೆ ಎರಡನೇ ತ್ರೈಮಾಸಿಕ ಆದಾಯಗಳು (Q2 Results) ಹೂಡಿಕೆದಾರರ ಮೇಲೆ ಅಷ್ಟೇನೂ ಪ್ರಭಾವ ಬೀರಿಲ್ಲ. ಜತೆಗೆ, ಅಮೆರಿಕದ ಖಜಾನೆಯ ಆದಾಯ ಹೆಚ್ಚಳವು ಷೇರು ಪೇಟೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಬುಧವಾರ ನಿಫ್ಟಿ 160 ಅಂಕಗಳ ಕುಸಿತ ಕಂಡು 19,122 ಅಂಶಗಳೊಂದಿಗೆ ಮುಕ್ತಾಯ ಕಂಡಿದೆ. ಇದೇ ವೇಲೆ, ಸೆನ್ಸೆಕ್ಸ್ 523 ಅಂಕ ಕುಸಿದು 64,049 ಅಂಶಗಳೊಂದಿಗೆ ಅಂತ್ಯವಾಗಿದೆ. ವಿಜಯ ದಶಮಿಯ ಮಾರನೇ ದಿನವು ಷೇರು ಪೇಟೆ ಧನಾತ್ಮಕವಾಗಿಯೇ ವ್ಯವಹಾರವನ್ನು ಆರಂಭಿಸಿತು. ಆದರೆ, ಮಧ್ಯಾಹ್ನದ ಹೊತ್ತಿಗೆ ಸಡನ್ ಕುಸಿಯಲಾರಂಭಿಸಿದ್ದರಿಂದ, ಹೂಡಿಕೆದಾರರಿಗೆ ಭಾರೀ ನಷ್ಟ ಉಂಟಾಯಿತು.

ಈ ಸುದ್ದಿಯನ್ನೂ ಓದಿ: Stock Market : ಷೇರುಪೇಟೆಗೆ ಪ್ರವೇಶಿಸಿದ ಬೆಂಗಳೂರಿನ ಗ್ರೀನ್‌ಷೆಫ್‌ ಅಪ್ಲೈಯನ್ಸಸ್‌, ಷೇರು ದರ ಎಷ್ಟು?

ಬುಧವಾರದ ಷೇರುಪೇಟೆ ವ್ಯವಹಾರದಲ್ಲಿ ಮಿಡ್ ಮತ್ತು ಸ್ಮಾಲ್‌ಕ್ಯಾಪ್ಸ್ ಷೇರುಗಳು ಭಾರೀ ನಷ್ಟವನ್ನು ಕಂಡಿವೆ. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ‌ಕ್ಯಾಪ್ ಷೇರುಗಳು ಶೇ.0.52 ಮತ್ತು ಶೇ.0.77 ಕ್ರಮವಾಗಿ ಕುಸಿತ ಕಂಡವು. ಸತತ ಐದನೇ ದಿನವ ಷೇರು ಪೇಟೆಯಲ್ಲಿ ಕರಡಿ ಕುಣಿತವೂ ಜೋರಾಗಿದ್ದು, ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ.

ಮುಂಬೈ ಷೇರುಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು (mcap) ಅಕ್ಟೋಬರ್ 17 ರಂದು 323.8 ಲಕ್ಷ ಕೋಟಿಯಿಂದ ಸುಮಾರು 309.2 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಹೂಡಿಕೆದಾರರು ಐದು ಅವಧಿಗಳಲ್ಲಿ ಸುಮಾರು 14.6 ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದಾರೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version