Site icon Vistara News

iPhone 14 | ಸೆಪ್ಟೆಂಬರ್‌ 7ಕ್ಕೆ ಐಫೋನ್‌ 14, ಆ್ಯಪಲ್‌ ವಾಚ್‌ ಬಿಡುಗಡೆ

iPhone

ನವದೆಹಲಿ: ಎಲ್ಲರ ಕಣ್ಣುಗಳು ಈಗ ಆ್ಯಪಲ್‌ನ ಹೊಸ ಐಫೋನ್‌ ೧೪ ಮತ್ತು ಇತರ ಉತ್ಪನ್ನಗಳ ಬಿಡುಗಡೆಯ ಕ್ಷಣವನ್ನು ಕಾತರದಿಂದ ನಿರೀಕ್ಷಿಸುತ್ತಿವೆ. ಸೆಪ್ಟೆಂಬರ್‌ ೭ರಂದು ಐಫೋನ್‌ ೧೪, ( iPhone 14) ಆ್ಯಪಲ್‌ ವಾಚ್‌, ನೂತನ ಮ್ಯಾಕ್ಸ್‌ ಲ್ಯಾಪ್‌ಟಾಪ್‌, ಐಪಾಡ್‌ ಅನಾವರಣವಾಗಲಿವೆ. ಸೆಪ್ಟೆಂಬರ್‌ ಅಂತ್ಯಕ್ಕೆ ನೂತನ ಉತ್ಪನ್ನಗಳು ಮಳಿಗೆಗಳಲ್ಲಿ ಲಭಿಸಲಿವೆ. ಐಫೋನ್‌ ಉತ್ಪನ್ನಗಳ ಪ್ರೇಮಿಗಳಿಗೆ ಸೆಪ್ಟೆಂಬರ್‌ ೭ ಹಬ್ಬದ ಸಂಭ್ರಮವಾಗಲಿದೆ.

ಸ್ಮಾರ್ಟ್‌ಫೋನ್‌ ವ್ಯಾಪಾರ ಜಗತ್ತಿನಾದ್ಯಂತ ಕಳೆಗುಂದಿರುವ ಸಂದರ್ಭದಲ್ಲಿ ಆ್ಯಪಲ್‌ನ ನೂತನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇವುಗಳು ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಆ್ಯಪಲ್‌ ವಾಚ್‌ ಸೀರೀಸ್‌ ೮, ಹಲವು ಹೊಸ ಫೀಚರ್‌ಗಳೊಂದಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದರ ವಿನ್ಯಾಸ ಕೂಡ ಬದಲಾಗುವ ಸಾಧ್ಯತೆ ಇದೆ.

ಐಫೋನ್‌ ೧೪ ವಿಶೇಷತೆ ಏನು?: ಐಫೋನ್‌ ೧೪ ನಾಲ್ಕು ಮಾದರಿಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಐಫೋನ್‌ ೧೪, ಐಫೋನ್‌ ೧೪‌ ಮ್ಯಾಕ್ಸ್‌, ಐಫೋನ್‌ ೧೪ ಪ್ರೊ, ಐಫೋನ್‌ ೧೪ ಪ್ರೊ ಮ್ಯಾಕ್ಸ್ ಬಿಡುಗಡೆಯಾಗಲಿದೆ. ಐಫೋನ್‌ ೧೨ ಶ್ರೇಣಿಯಲ್ಲಿರುವ ಐಫೋನ್‌ ಮಿನಿ ಅನ್ನು ಈ ವರ್ಷ ಕಂಪನಿ ಕೈಬಿಡಲಿದೆ.

ಐಫೋನ್‌ ೧೪ ಪ್ರೊ ವಿಶೇಷತೆ ಏನಿರಬಹುದು? ೬.೧ ಮತ್ತು ೬.೭ ಇಂಚು ಸ್ಕ್ರೀನ್‌, ೧೨೦ Hz ProMotion, 6GB RAM, 48MP ವೈಡ್‌ ಕ್ಯಾಮೆರಾ, ೮ಕೆ ವಿಡಿಯೊ ರೆಕಾರ್ಡಿಂಗ್‌, ಹೊಸ ಫ್ರಂಟ್‌ ಕ್ಯಾಮೆರಾ, ವೈಫೈ೬ಇ.

ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ಉತ್ಪಾದನೆ ಹೆಚ್ಚಳಕ್ಕೆ ಆಪಲ್ ಗುತ್ತಿಗೆದಾರರ ಪರಿಶೀಲನೆ

Exit mobile version