Site icon Vistara News

SEBI : ಸೆಬಿಯಿಂದ ಐಪಿಒ ಕ್ಲಿಯರೆನ್ಸ್‌ ನಿಯಮಾವಳಿ ಬಿಗಿ, 6 ಕಂಪನಿಗಳ ಅರ್ಜಿ ವಾಪಸ್

bse

ಮುಂಬಯಿ: ಪೇಟಿಎಂ ಐಪಿಒ ವೈಫಲ್ಯವಾದ ಬಳಿಕ ಮಾರುಕಟ್ಟೆ ನಿಯಂತ್ರಕ ಸೆಬಿ ಆರಂಭಿಕ ಷೇರು ಬಿಡುಗಡೆ (ಐಪಿಒ) ಕುರಿತ ನಿಯಮಾವಳಿಗಳನ್ನು ಬಿಗಿಗೊಳಿಸಿದೆ. (IPO) 6 ಕಂಪನಿಗಳ ಐಪಿಒ ಅರ್ಜಿಗಳನ್ನು ಹಿಂತಿರುಗಿಸಿದೆ. ಓಯೊ ಆನ್‌ಲೈನ್‌ ಹೋಟೆಲ್‌ ಸೇವೆ ಸರಣಿ ಕಂಪನಿಯ ಐಪಿಒ ಅರ್ಜಿಯನ್ನು ಎರಡು ತಿಂಗಳಿನ ಹಿಂದೆ ಹಿಂತಿರುಗಿಸಲಾಗಿತ್ತು. ಮತ್ತೊಮ್ಮೆ ಕರಡು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಓಯೋ ಹೊರತುಪಡಿಸಿ ಗೋ ಡಿಜಿಟ್‌ ಜನರಲ್‌ ಇನ್ಷೂರೆನ್ಸ್‌, ಲಾವಾ ಇಂಟರ್‌ನ್ಯಾಶನಲ್‌, ಪೇಮೇಟ್‌ ಇಂಡಿಯಾ, ಫಿನ್‌ಕೇರ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಇಂಡಿಯಾ, ಬಿವಿಜಹಿ ಲಿಸಿಸ್‌ ಅರ್ಜಿಯನ್ನು ಹಿಂತಿರುಗಿಸಲಾಗಿದೆ. ಈ ಕಂಪನಿಗಳು ಒಟ್ಟಾರೆ 12,500 ಕೋಟಿ ರೂ. ಐಪಿಒ ನಡೆಸಲು ಉದ್ದೇಶಿಸಿತ್ತು.

ಹೀಗಿದ್ದರೂ, ಹೂಡಿಕೆದಾರರು ಹಣ ಕಳೆದುಕೊಳ್ಳದಂತೆ ತಡೆಯಲು ಸೆಬಿ ಇದೀಗ ನಿಗಾ ವಹಿಸಿದೆ. ಐಪಿಒಗೆ ಅನುಮತಿ ನೀಡುವುದಕ್ಕೆ ಮುನ್ನ ಕೂಲಂಕಷ ಪರಿಶೀಲನೆಗೆ ಮುಂದಾಗಿದೆ. ಪೇಟಿಎಂ 2021ರಲ್ಲಿ 18300 ಕೋಟಿ ರೂ. ಗಾತ್ರದ ಐಪಿಒ ನಡೆಸಿತ್ತು. ಆದರೆ ಈಗಲೂ ಬಿಡುಗಡೆಯ ದರಲ್ಲಿಂತ 72% ಕಡಿಮೆ ದರದಲ್ಲಿ ಷೇರು ವಹಿವಾಟು ನಡೆಸುತ್ತಿದೆ.

Exit mobile version