ಬೆಂಗಳೂರು: ಮಹಿಳೆಯರ ಸಾಂಪ್ರದಾಯಿಕ ಉಡುಪುಗಳ ಬ್ರಾಂಡ್‌ಗಳಾದ ಕಲಾ ಮಂದಿರ, ವರ ಮಹಾ ಲಕ್ಷ್ಮಿ ಸಿಲ್ಕ್ಸ್, ಕೆಎಲ್‌ಎಂ ಫ್ಯಾಷನ್ ಮಾಲ್‌ನ ಮಾತೃ ಸಂಸ್ಥೆಯಾಗಿರುವ ಸಾಯಿ ಕಲಾ ಮಂದಿರ ಲಿಮಿಟೆಡ್, ( Sai silks kalamamdir) ಐಪಿಒ ಮೂಲಕ ಷೇರು ಮಾರುಕಟ್ಟೆ (Sai silks IPO) ಪ್ರವೇಶಿಸಲು ಸಜ್ಜಾಗಿದೆ.
ಈ ಐಪಿಒ ಮೂಲಕ 1200 ಕೋಟಿ ರೂ.ಗಳನ್ನು ಸಂಗ್ರಹಿಸಲು ಸಾಯಿ ಸಿಲ್ಕ್ಸ್ ಕಲಾ ಮಂದಿರ ಸಜ್ಜಾಗಿದೆ. ಸೆಬಿ ಈ ಐಪಿಒಗೆ ಒಪ್ಪಿಗೆ ನೀಡಿದೆ. ಕಳೆದ ಜುಲೈನಲ್ಲಿ ಕಂಪನಿ ಐಪಿಒ ಕರಡು ಅರ್ಜಿ ಸಲ್ಲಿಸಿತ್ತು.
ಐಪಿಒ ಮೂಲಕ ದೊರೆಯುವ ನಿಧಿಯನ್ನು ಬಂಡವಾಳ, ಸಾಲ ಮರು ಪಾವತಿ, 25 ಹೊಸ ಮಳಿಗೆಗಳ ಸ್ಥಾಪನೆ, ಎರಡು ಗೋದಾಮುಗಳ ನಿರ್ಮಾಣಕ್ಕೆ ಬಳಸಲು ಕಂಪನಿ ಉದ್ದೇಶಿಸಿದೆ. ಕಂಪನಿಯು 2021-22ರಲ್ಲಿ 1,129 ಕೋಟಿ ರೂ. ಆದಾಯ ಗಳಿಸಿತ್ತು. 58 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.