ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ತನ್ನ ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆಪ್ ಮೂಲಕ ಟಿಕೆಟ್ ಖರೀದಿಸುವವರಿಗೆ ಬುಕಿಂಗ್ ಮಿತಿಯನ್ನು ಮಾಸಿಕ 6ರಿಂದ 12ಕ್ಕೆ ಏರಿಸಿದೆ.
ಇದರಲ್ಲೂ ಮುಖ್ಯವಾಗಿ ಆಧಾರ್ ಲಿಂಕ್ ಇರುವ ಯೂಸರ್ ಐಡಿ ಇರುವವರಿಗೆ ಮಾಸಿಕ 24 ಟಿಕೆಟ್ ಹಾಗೂ ಆಧಾರ್ ಲಿಂಕ್ ಇಲ್ಲದ ಯೂಸರ್ ಐಡಿ ಇರುವವರಿಗೆ ಮಾಸಿಕ 12 ಟಿಕೆಟ್ ಖರೀದಿಸಲು ಅನುಕೂಲ ಕಲ್ಪಿಸಲಾಗಿದೆ.
ಪ್ರಸ್ತುತ ತಿಂಗಳಿಗೆ ಗರಿಷ್ಠ 6 ಟಿಕೆಟ್‌ಗಳನ್ನು ಐಆರ್‌ಸಿಟಿಸಿ ವೆಬ್‌ಸೈಟ್, ಆಪ್ ಮೂಲಕ ಬುಕ್ ಮಾಡಬಹುದು. ಆಧಾರ್ ಲಿಂಕ್ ಇರುವ ಐಡಿ ಮೂಲಕ 12 ಟಿಕೆಟ್ ಗಳನ್ನು ಬುಕ್ ಮಾಡಬಹುದು.
ಹೆಚ್ಚುವರಿ ಲಗ್ಗೇಜ್ ಇದ್ದರೆ ಶುಲ್ಕ
ರೈಲ್ವೆ ಪ್ರಯಾಣಿಕರು ಹೆಚ್ಚುವರಿ ಲಗ್ಗೇಜ್ ಅನ್ನು ತಮ್ಮ ಜತೆ ಕೊಂಡೊಯ್ದರೆ ಅದಕ್ಕೆ ಶುಲ್ಕ ಪಾವತಿಸಬೇಕು. ತಪ್ಪಿದರೆ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ. ಒಂದು ವೇಳೆ ಹೆಚ್ಚುವರಿ ಲಗ್ಗೇಜ್ ಇದ್ದರೆ ಇಲಾಖೆಯ ಪಾರ್ಸೆಲ್ ಆಫೀಸ್‌ಗೆ ತೆರಳಿ ನಿಗದಿತ ಶುಲ್ಕ ನೀಡಿ ಬುಕ್ ಮಾಡಬೇಕು.
ಏಸಿ ಪ್ರಥಮ ದರ್ಜೆ ಕ್ಲಾಸ್‌ನಲ್ಲಿ 70 ಕೆಜಿ ತನಕ ಉಚಿತವಾಗಿ ಲಗೇಜ್ ಸಾಗಿಸಬಹುದು. ಎಸಿ 2 ಟೈರ್ ನಲ್ಲಿ ಮಿತಿ 50 ಕೆಜಿ. ಎಸಿ-3 ಟೈರ್ ಸ್ಲೀಪರ್‌ನಲ್ಲಿ 40 ಕೆಜಿಗಳ ಮಿತಿ ಇದೆ. 2-ಕ್ಲಾಸ್‌ನಲ್ಲಿ ಮಿತಿ 25 ಕೆಜಿ ಆಗಿದೆ.