Site icon Vistara News

Isha Ambani: ತಾನು ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಐವಿಎಫ್ ಮೂಲಕ ಎಂದ ಇಶಾ ಅಂಬಾನಿ

Isha Ambani

ಭಾರತೀಯ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (Mukesh ambani) ಅವರ ಪುತ್ರಿ ಇಶಾ ಅಂಬಾನಿ (Isha Ambani) ಮಕ್ಕಳನ್ನು ಪಡೆಯಲು ಐವಿಎಫ್ (IVF) ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತನ್ನನ್ನು ಮತ್ತು ಸಹೋದರ ಆಕಾಶ್ ಅಂಬಾನಿ (akash ambani) ನನ್ನು ಪಡೆಯಲು ತಾಯಿ ನೀತಾ ಅಂಬಾನಿ (nita ambani) ಕೂಡ ಐವಿಎಫ್ ಮೊರೆ ಹೋಗಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

32 ವರ್ಷದ ಅವರು ತಮ್ಮ ಮಾತೃತ್ವದ ಪ್ರಯಾಣದ ಬಗ್ಗೆ ಮಾತನಾಡಿದ್ದು, ಐವಿಎಫ್ ವಿಷಯದ ಸುತ್ತಲಿನ ನಿಷೇಧವನ್ನು ಹೋಗಲಾಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ನೀತಾ ಅಂಬಾನಿ ಈ ಹಿಂದೆ ಐವಿಎಫ್ ಸಹಾಯದಿಂದ ಗರ್ಭಧರಿಸುವ ಬಗ್ಗೆ ಮಾತನಾಡಿದ್ದರು. ವೈದ್ಯರು ತನಗೆ ಎಂದಿಗೂ ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ಆಘಾತವಾಗಿತ್ತು. ಆಗ ನನಗೆ ಕೇವಲ 23 ವರ್ಷ. ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಡಾ. ಫಿರೂಜಾ ಪಾರಿಖ್ ಅವರ ಸಹಾಯದಿಂದ ನಾನು ಮೊದಲು ನನ್ನ ಅವಳಿ ಮಕ್ಕಳನ್ನು ಗರ್ಭದಲ್ಲಿ ಧರಿಸಿದೆ ಎಂದು ಅವರು ಅವರು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದೀಗ ತಾಯಿ ನೀತಾ ಅಂಬಾನಿಯಂತೆ ಇಶಾ ಕೂಡ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ನಾನು ತಾಯಿಯಾಗಿದ್ದೇನೆ ಎಂದು ಬಹಳ ಬೇಗ ಹೇಳುತ್ತಿದ್ದೇನೆ. ಈ ಬಗ್ಗೆ ನಾವು ಸಾಮಾನ್ಯವಾಗಿರಬೇಕು. ಇದರ ಬಗ್ಗೆ ನಾಚಿಕೆ ಪಡಬಾರದು. ಇಂತವರನ್ನು ಯಾರೂ ಪ್ರತ್ಯೇಕ ಮಾಡಬಾರದು. ಇದು ಅತ್ಯಂತ ಕಷ್ಟಕರ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದಣಿವಾಗುತ್ತದೆ ಎಂದು ಹೇಳಿದರು.

ಇಂದು ಜಗತ್ತಿನಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನವಿದೆ. ಮಕ್ಕಳನ್ನು ಪಡೆಯಲು ನಾವು ಏಕೆ ಇದನ್ನು ಬಳಸಬಾರದು ಎಂದು ಪ್ರಶ್ನಿಸಿದ ಅವರು, ಇದು ಉತ್ಸುಕರಾಗಿರುವ ವಿಷಯವಾಗಿರಬೇಕು. ಮರೆ ಮಾಚಬೇಕಾದ ಸಂಗತಿಯಲ್ಲ. ಈ ಬಗ್ಗೆ ಮಹಿಳೆಯರು ಮಾತನಾಡಲು ಮುಕ್ತವಾದರೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಇಶಾ ಅವರು ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದು, ಒಬ್ಬ ಮಗಳು ಮತ್ತು ಮಗನೊಂದಿಗೆ ಅವಳಿ ಮಕ್ಕಳನ್ನು ಹೊಂದಿದ್ದಾರೆ. 2018ರ ಡಿಸೆಂಬರ್ 12 ರಂದು ದಂಪತಿ ಮುಂಬಯಿ ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.

ಐವಿಎಫ್ ಎಂದರೇನು?

ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಮಕ್ಕಳನ್ನು ಪಡೆಯಲು ಒಂದು ವೈದ್ಯಕೀಯ ವಿಧಾನವಾಗಿದೆ. ಪ್ರಯೋಗಾಲಯದಲ್ಲಿ ವೀರ್ಯದಿಂದ ಮೊಟ್ಟೆಯನ್ನು ಫಲವತ್ತಾಗಿಸಲಾಗುತ್ತದೆ. ಇದು ಫಲವತ್ತತೆ ಸಮಸ್ಯೆಗಳಿರುವ ವ್ಯಕ್ತಿಗಳು ಅಥವಾ ದಂಪತಿಗೆ ಸಹಾಯ ಮಾಡಲು ಬಳಸುವ ಸಾಮಾನ್ಯ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ.

ಈ ಪ್ರಕ್ರಿಯೆಯು ಬಹು ಮೊಟ್ಟೆಗಳನ್ನು ಉತ್ಪಾದಿಸಲು ಮಹಿಳೆಯ ಅಂಡಾಶಯವನ್ನು ಉತ್ತೇಜಿಸುತ್ತದೆ. ಮೊಟ್ಟೆಗಳನ್ನು ಪಡೆದು ನಿಯಂತ್ರಿತ ವಾತಾವರಣದಲ್ಲಿ ವೀರ್ಯದೊಂದಿಗೆ ಫಲವತ್ತಾಗಿಸುತ್ತದೆ ಮತ್ತು ಅನಂತರ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

ನಿರ್ಬಂಧಿಸಲಾದ ಫಾಲೋಪಿಯನ್ ಟ್ಯೂಬ್‌ಗಳು, ಪುರುಷ ಬಂಜೆತನ, ಅಂಡೋತ್ಪತ್ತಿ ಅಸ್ವಸ್ಥತೆಗಳು ಅಥವಾ ವಿವರಿಸಲಾಗದ ಬಂಜೆತನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಐವಿಎಫ್ ಅನ್ನು ಬಳಸಬಹುದು ಮತ್ತು ಅನೇಕರು ಗರ್ಭಧಾರಣೆ ಮತ್ತು ಪಿತೃತ್ವವನ್ನು ಸಾಧಿಸಲು ಇದು ಸಹಾಯ ಮಾಡಿದೆ.

ಇಶಾ ಅಂಬಾನಿ ಅವರ ಕಿರಿಯ ಸಹೋದರ ಅನಂತ್ ಅಂಬಾನಿ ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈ ಕಾರಣದಿಂದ ಇಶಾ ಮತ್ತು ಅವರ ಕುಟುಂಬ ವರ್ಷವಿಡೀ ಸುದ್ದಿಯಲ್ಲಿದೆ.

Exit mobile version