Site icon Vistara News

IT ವೆಬ್‌ ಪೋರ್ಟಲ್‌ನಲ್ಲಿ ಮತ್ತೆ ಟ್ರಬಲ್, ಸರಿಪಡಿಸಲು ಇನ್ಫೋಸಿಸ್‌ಗೆ ಸೂಚನೆ

online itr

ನವ‌ ದೆಹಲಿ: ಆದಾಯ ತೆರಿಗೆ ಇಲಾಖೆಯ ವೆಬ್‌ ಪೋರ್ಟಲ್‌ನಲ್ಲಿ ಮತ್ತೆ ತಾಂತ್ರಿಕ ಅಡಚಣೆ ಕಾಣಿಸಿಕೊಂಡಿದೆ.

ಈ ಸಮಸ್ಯೆಯನ್ನು ಕೂಡಲೆ ಬಗೆಹರಿಸುವಂತೆ ಇದರ ಸಾಫ್ಟ್‌ ವೇರ್‌ ಅಭಿವೃದ್ಧಿಪಡಿಸಿರುವ ಇನ್ಫೋಸಿಸ್‌ಗೆ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಿಡುಗಡೆಯಾಗಿ ಇನ್ನೂ ವರ್ಷದೊಳಗೆ ಮತ್ತೆ ಸಮಸ್ಯೆಗೀಡಾಗಿದೆ.

ಐಟಿ ವೆಬ್‌ ಪೋರ್ಟಲ್‌ ನಲ್ಲಿ ಅಡಚಣೆ ಆಗಿರುವ ಬಗ್ಗೆ ಬಳಕೆದಾರರು ದೂರು ನೀಡಿದ್ದು, ಮಂಗಳವಾರ ಸಮಸ್ಯೆ ಎದುರಿಸಿದರು. ವೆಬ್‌ ಪೋರ್ಟಲ್‌ ಹ್ಯಾಕ್‌ ಆಗಿತ್ತು. ವೆಬ್‌ ಪೋರ್ಟಲ್‌ನ ಸಮಸ್ಯೆಯಿಂದ ಯಾವುದೇ ಡೇಟಾ ಸೋರಿಕೆ ಆಗಿಲ್ಲ ಎಂದು ಇಲಾಖೆ ತಿಳಿಸಿದೆ. ಕಳೆದ ವರ್ಷ ಹಲವು ಸಲ ವೆಬ್‌ ಪೋರ್ಟಲ್‌ ಸಮಸ್ಯೆಗೀಡಾಗಿತ್ತು. ಹೀಗಾಗಿ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಗಡುವನ್ನು ವಿಸ್ತರಿಸಲಾಗಿತ್ತು.

Exit mobile version