Site icon Vistara News

IT Department: ಪಾವತಿಸಿದ ತೆರಿಗೆ, ಹಣಕಾಸು ವಹಿವಾಟು ಮಧ್ಯೆ ಮಿಸ್‌ ಮ್ಯಾಚ್‌; ಐಟಿ ಇಲಾಖೆಯಿಂದ ಅಲರ್ಟ್‌ ಮೆಸೇಜ್‌

income tax

income tax

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪಾವತಿಸಿದ ತೆರಿಗೆಗಳು ಮತ್ತು ಹಣಕಾಸು ವಹಿವಾಟುಗಳ ಮಧ್ಯೆ ಹೊಂದಿಕೆಯಾಗದಿದ್ದರೆ ಅಂತಹ ತೆರಿಗೆದಾರರಿಗೆ ಇಮೇಲ್‌ ಮತ್ತು ಮತ್ತು ಎಸ್ಎಂಎಸ್‌ಗಳನ್ನು ಕಳುಹಿಸಲು ಆರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ (IT Department) ಭಾನುವಾರ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಇ-ಅಭಿಯಾನವನ್ನು ಕೈಗೊಳ್ಳುತ್ತಿದೆ. ತಾಳೆಯಾಗದ ವ್ಯಕ್ತಿಗಳು / ಘಟಕಗಳಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ತಿಳಿಸುವ ಗುರಿಯನ್ನು ಹೊಂದಲಾಗಿದೆ. ತಮ್ಮ ಮುಂಗಡ ತೆರಿಗೆ ಹೊಣೆಗಾರಿಕೆಯನ್ನು ಸರಿಯಾಗಿ ಲೆಕ್ಕ ಹಾಕಲು ಮತ್ತು ಮಾರ್ಚ್ 15ರಂದು ಅಥವಾ ಅದಕ್ಕೂ ಮೊದಲು ಬಾಕಿ ಮುಂಗಡ ತೆರಿಗೆಯನ್ನು ಪಾವತಿಸಲು ತಿಳಿಸಲಾಗಿದೆ.

2023-24ರ ಹಣಕಾಸು ವರ್ಷದಲ್ಲಿ ವ್ಯಕ್ತಿಗಳು / ಸಂಸ್ಥೆಗಳು ಕೈಗೊಂಡ ನಿರ್ದಿಷ್ಟ ಹಣಕಾಸು ವಹಿವಾಟುಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಕೆಲವು ಮಾಹಿತಿ ಸಿಕ್ಕಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (CBDT) ತಿಳಿಸಿದೆ. “ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಪಾವತಿಸಿದ ತೆರಿಗೆಗಳ ವಿಶ್ಲೇಷಣೆಯ ಆಧಾರದ ಮೇಲೆ, 2023-24ರ ಹಣಕಾಸು ವರ್ಷದಲ್ಲಿ ಸಂಬಂಧಪಟ್ಟ ವ್ಯಕ್ತಿಗಳು / ಸಂಸ್ಥೆಗಳು ಮಾಡಿದ ಹಣಕಾಸು ವಹಿವಾಟುಗಳಿಗೆ ಅನುಗುಣವಾಗಿಲ್ಲದ ತೆರಿಗೆ ಪಾವತಿಯ ಮಾಹಿತಿಯನ್ನು ಇಲಾಖೆ ಕಲೆ ಹಾಕಿದೆ” ಎಂದು ಸಿಬಿಡಿಟಿ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ನಿರ್ದಿಷ್ಟ ಹಣಕಾಸು ವಹಿವಾಟುಗಳ ಮಾಹಿತಿಯನ್ನು ವಿವಿಧ ಮೂಲಗಳಿಂದ ಪಡೆಯುತ್ತದೆ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಸ್ವಯಂಪ್ರೇರಿತ ತೆರಿಗೆ ಅನುಸರಣೆಯನ್ನು ಉತ್ತೇಜಿಸಲು ಈ ಮಾಹಿತಿಯನ್ನು ವಾರ್ಷಿಕ ಮಾಹಿತಿ ಹೇಳಿಕೆ (Annual Information Statement) ಮಾಡ್ಯೂಲ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನೂ ಯಾರೂ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವ್ಯಕ್ತಿಗಳು / ಘಟಕಗಳು ತಮ್ಮ ಇ ಫೈಲಿಂಗ್ ಖಾತೆಗೆ ಲಾಗ್ ಇನ್ ಆಗಿ ಮಹತ್ವದ ವಹಿವಾಟುಗಳ ವಿವರಗಳನ್ನು ವೀಕ್ಷಿಸಬಹುದು. ಇದಕ್ಕಾಗಿ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ನೋಂದಾಯಿಸದ ವ್ಯಕ್ತಿಗಳು / ಸಂಸ್ಥೆಗಳು ಮೊದಲು ತಮ್ಮ ಹೇಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಆದಾಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: UCO Bank: ಯುಕೋ ಬ್ಯಾಂಕ್‌ನಲ್ಲಿ 820 ಕೋಟಿ ರೂ. ಹಗರಣ; 67 ಕಡೆ ಸಿಬಿಐ ರೇಡ್‌

Exit mobile version