Site icon Vistara News

IT Retrun| 4 ಕೋಟಿಗೆ ಏರಿದ ಐಟಿ ರಿಟರ್ನ್‌ ಸಲ್ಲಿಕೆ, ಗಡುವು ಮುಂದೂಡಿಕೆ ಇಲ್ಲ ಎಂದ ಕೇಂದ್ರ

Income tax return filing

ನವ ದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆಗೆ ಜುಲೈ ೩೧ರ ಗಡುವನ್ನು ವಿಸ್ತರಿಸಲು ಒತ್ತಾಯಿಸಿ ಅಭಿಯಾನದ ಮೂಲಕ ಒತ್ತಡ ಹೇರಲಾಗುತ್ತಿದ್ದರೂ, ಮುಂದೂಡಿಕೆಯ ಸಾಧ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

೨೦೨೧ರ ಡಿಸೆಂಬರ್‌ ೩೧ರ ಮಟ್ಟವನ್ನು ಹೋಲಿಸಿದರೆ ಈಗ ೬೮% ಮಂದಿ ಐಟಿ ರಿಟರ್ನ್‌ ಸಲ್ಲಿಸಿದ್ದಾರೆ. ರಿಟರ್ನ್‌ ಸಲ್ಲಿಸಿದವರ ಒಟ್ಟು ಸಂಖ್ಯೆ ಗುರುವಾರ ಸಂಜೆಯ ವೇಳೆಗೆ ೪ ಕೋಟಿಗೆ ಏರಿಕೆಯಾಗಿದೆ.

ಕಳೆದ ವರ್ಷ ಕೋವಿಡ್-‌೧೯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜುಲೈ ೩೧ರ ಗಡುವನ್ನು ಡಿಸೆಂಬರ್‌ ೩೧ರ ತನಕ ವಿಸ್ತರಿಸಲಾಗಿತ್ತು. ಐಟಿ ರಿಟರ್ನ್‌ ಸಲ್ಲಿಕೆ ಚುರುಕಾಗಿದ್ದು, ಗುರುವಾರ ಪ್ರತಿ ಗಂಟೆಗೆ ಸರಾಸರಿ ೩ ಲಕ್ಷ ರಿಟರ್ನ್‌ಗಳು ಸಲ್ಲಿಕೆಯಾಗಿವೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ವಿಸ್ತಾರ Money Guide| ಸಕಾಲಕ್ಕೆ ಐಟಿ ರಿಟರ್ನ್‌ ಸಲ್ಲಿಸದಿದ್ದರೆ 5,000 ರೂ. ತನಕ ದಂಡ

Exit mobile version