Site icon Vistara News

ITR Filing : ಐಟಿ ರಿಟರ್ನ್‌ನಲ್ಲಿ ಎಷ್ಟು ವಿಧಗಳಿವೆ? ಯಾರು ಯಾವುದನ್ನು ಬಳಸಬೇಕು?

tax

ಕಳೆದ 2022-23ರ ಆದಾಯ ತೆರಿಗೆಯ ವಿವರ ಸಲ್ಲಿಕೆಗೆ (Income tax return filing) ಕೊನೆಯ ದಿನಾಂಕ ಜುಲೈ 31 ಆಗಿದೆ. ಇನ್ನು ಆರು ದಿನ ಮಾತ್ರ ಉಳಿದಿದೆ. ಹೀಗಾಗಿ ಐಟಿ ರಿಟರ್ನ್‌ ಸಲ್ಲಿಸದಿದ್ದರೆ ಗಡುವಿನ ಒಳಗಾಗಿ ಸಲ್ಲಿಸುವುದು ಸೂಕ್ತ. ಐಟಿಆರ್‌ಗಳಲ್ಲಿ ಏಳು ವಿಧಗಳಿವೆ. ಐಟಿಆರ್-‌1ರಿಂದ ಐಟಿಆರ್‌ -7 ತನಕ ಅರ್ಜಿ ವಿಧಗಳು ಇವೆ. ಇವುಗಳಲ್ಲಿ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳ ಬೇಕು.

ಐಟಿಆರ್-‌1 ಸಹಜ್:

ಐಟಿಆರ್-‌1 ಯಾರಿಗೆ ಅನ್ವಯವಾಗುತ್ತದೆ ಎಂಬುದ್ನು ತಿಳಿಯೋಣ. ಈ ಅರ್ಜಿಯು ಕೆಳಕಂಡವರಿಗೆ ಅಗತ್ಯ.

  1. ವೇತನ/ ಪಿಂಚಣಿ ಆದಾಯ ಇರುವವರಿಗೆ ಅನ್ವಯ.
  2. ಒಂದು ಮನೆಯ ಆಸ್ತಿಯಿಂದ ಆದಾಯ ಇರುವವರಿಗೆ (ಹಳೆ ವರ್ಷದ ನಷ್ಟ ಫಾರ್‌ವರ್ಡ್‌ ಆಗಿರುವುದನ್ನು ಹೊರತುಪಡಿಸಿ)
  3. ಇತರ ಮೂಲಗಳಿಂದ ಆದಾಯ ಇರುವವರಿಗೆ ( ಲಾಟರಿ ಮತ್ತು ಕುದುರೆ ರೇಸ್‌ ಇತ್ಯಾದಿಗಳಿಂದ)
  4. 5,000 ರೂ. ತನಕ ಕೃಷಿ ಆದಾಯ ಇರುವವರಿಗೆ ಅನ್ವಯ.

ಯಾರು ಐಟಿಆರ್-‌1 ಬಳಸಬಾರದು?

  1. ಒಟ್ಟು ಆದಾಯ 50 ಲಕ್ಷ ರೂ.ಗಿಂತ ಹೆಚ್ಚು ಇರುವವರು.
  2. ಕೃಷಿ ಆದಾಯ 5,000 ರೂ.ಗಿಂತ ಹೆಚ್ಚು ಇರುವವರು.
  3. ತೆರಿಗೆಗೆ ಅರ್ಹ ಕ್ಯಾಪಿಟಲ್‌ ಗೇನ್ಸ್‌ ಇರುವವರು.
  4. ಬಿಸಿನೆಸ್‌ ಅಥವಾ ಪ್ರೊಫೆಷನ್‌ ಮೂಲಕ ಆದಾಯ ಗಳಿಸುವವರು.
  5. ಕಂಪನಿಯ ನಿರ್ದೇಶಕ ಆಗಿದ್ದರೆ.
  6. ಅನ್‌ ಲಿಸ್ಟೆಡ್‌ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಇದ್ದರೆ.
  7. ವಿದೇಶಿ ಮೂಲದ ಆದಾಯ ಇದ್ದರೆ.
  8. ಸೆಕ್ಷನ್‌ 194 N ಅಡಿಯಲ್ಲಿ ತೆರಿಗೆ ಕಡಿತ ಆಗಿದ್ದರೆ.
  9. ಇಎಸ್‌ಒಪಿ ಅಡಿಯಲ್ಲಿ ತೆರಿಗೆ ಕಡಿತ ಮುಂದೂಡಿಕೆಯಾಗಿದ್ದರೆ.
  10. ಫಾರ್‌ ವರ್ಡ್‌ ಲಾಸ್‌ ಆಗಿದ್ದರೆ.

ಐಟಿಆರ್-‌2 ಇದು ಕೆಳಕಂಡವರಿಗೆ ಅಗತ್ಯ:

  1. ಐಟಿಆರ್‌ 2 ವೇತನ/ಪಿಂಚಣಿ ಆದಾಯ ಇರುವವರಿಗೆ ಬೇಕು.
  2. ಮನೆಯ ಪ್ರಾಪರ್ಟಿಯಿಂದ ಆದಾಯ ಇರುವವರಿಗೆ ಅಗತ್ಯ.
  3. ಇತರ ಮೂಲಗಳಿಂದ ಆದಾಯ.
  4. ಕಂಪನಿಯ ನಿರ್ದೇಶಕ ಆಗಿದ್ದರೆ.
  5. ಕಂಪನಿಯ ಪಾಲುದಾರಿಕೆ ಇದ್ದರೆ
  6. ಅನ್‌ ಲಿಸ್ಟೆಡ್‌ ಈಕ್ವಿಟಿ ಶೇರುಗಳಿಂದ ಆದಾಯ ಇದ್ದರೆ
  7. ಕ್ಯಾಪಿಟಲ್‌ ಗೈನ್ಸ್‌ ಆದಾಯ ಇದ್ದರೆ
  8. ವಿದೇಶಿ ಮೂಲದ ಆದಾಯ ಇದ್ದರೆ
  9. ಕೃಷಿ ಆದಾಯ 5,000 ರೂ. ಮೀರಿದ್ದರೆ.
  10. ಒಟ್ಟು ಆದಾಯ 50 ಲಕ್ಷ ರೂ. ಮೀರಿದ್ದರೆ.

ಯಾರು ಐಟಿಆರ್-‌2 ಬಳಸಬಾರದು? : ಬಿಸಿನೆಸ್‌ ಮೂಲಕ ಆದಾಯ ಇರುವವರು ಐಟಿಆರ್-‌2 ಬಳಸಬಾರದು.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಐಟಿಆರ್-‌3 ಯಾರಿಗೆ ಅಗತ್ಯ? ಪ್ರಾಪರ್ಟಿ ಅಥವಾ ಬಿಸಿನೆಸ್‌, ಪ್ರೊಫೆಶನ್ ಮೂಲಕ ಆದಾಯ ಇರುವವರು ಐಟಿಆರ್-‌3 ಬಳಸಬೇಕು. ಕಂಪನಿಯ ನಿರ್ದೇಶಕರಾಗಿರುವವರು, ಅನ್‌ ಲಿಸ್ಟೆಡ್‌ ಕಂಪನಿಯ ಈಕ್ವಿಟಿ ಶೇರುಗಳನ್ನು ಹೊಂದಿರುವವರು, ಹೌಸ್‌ ಪ್ರಾಪರ್ಟಿ, ವೇತನ/ಪಿಂಚಣಿ, ಇತರ ಮೂಲಗಳಿಂದ ಆದಾಯ ಇರುವವರು ಬಳಸಬಹುದು. ಕಂಪನಿಯ ಪಾಲುದಾರಿಕೆ ಇದ್ದರೆ ಸಲ್ಲಿಸಬಹುದು. ಕೊನೆಯ ಗಳಿಗೆಯಲ್ಲಿ ಐಟಿಆರ್‌ ಸಲ್ಲಿಸುವುದಕ್ಕಿಂತ ಸಾಕಷ್ಟು ಮೊದಲೇ ಸಿದ್ಧತೆ ನಡೆಸಿ ರಿಟರ್ನ್‌ ಫೈಲಿಂಗ್‌ ಮಾಡುವುದು ಸೂಕ್ತ. ಈ ಸಲ ಗಡುವು ಮುಂದೂಡಿಕೆ ಆಗುವ ಸಾಧ್ಯತೆ ಕಡಿಮೆ ಎಂದು ಕೂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಗಡುವಿನ ಒಳಗೆ ಸಲ್ಲಿಸುವುದು ಸೂಕ್ತ. ಗಡುವು ಮೀರಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಳಂಬಿತ ಶುಲ್ಕ, ಪೆನಾಲ್ಟಿ, ಬಡ್ಡಿ ಅನ್ವಯವಾಗುತ್ತದೆ.

Exit mobile version