Site icon Vistara News

ITR filing online for AY 2023-24 : ವೇತನದಾರರಿಗೆ ಆನ್‌ಲೈನ್‌ನಲ್ಲಿ ಐಟಿ ರಿಟರ್ನ್ಸ್‌ ಸಲ್ಲಿಕೆಗೆ ಕಂಪ್ಲೀಟ್‌ ಗೈಡ್

Income tax return filing

ಆದಾಯ ತೆರಿಗೆ ಮಿತಿಗಿಂತ ಹೆಚ್ಚಿನ ಆದಾಯ ಇರುವ ವೇತನದಾರರು 2023-24ರ ಐಟಿ ರಿಟರ್ನ್‌ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. (ITR filing online for AY 2023-24) ಆನ್‌ಲೈನ್‌ನಲ್ಲಿ ಐಟಿಆರ್‌ ಸಲ್ಲಿಸುವುದರ ಬಗ್ಗೆ ಇಲ್ಲಿದೆ ವಿವರ. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಯಾವುದೇ ಶುಲ್ಕ ಇಲ್ಲದೆಯೇ ಉಚಿತವಾಗಿ ಐಟಿ ರಿಟರ್ನ್‌ ಸಲ್ಲಿಸಬಹುದು.

ಐಟಿಆರ್‌ ಅನ್ನು ನೀವು ಏಕೆ ಸಲ್ಲಿಸಬೇಕು? ಬಹುತೇಕ ವೇತನದಾರರು 5 ಲಕ್ಷ ರೂ.ಗಳಿಂದ 20 ಲಕ್ಷ ರೂ. ವೇತನದ ಮಿತಿಯಲ್ಲಿ ಇರುವವರು. ಅವರಲ್ಲಿ ಅನೇಕ ಮಂದಿಗೆ ವೇತನ ಹೊರತುಪಡಿಸಿ ಬೇರೆ ಆದಾಯ ಮೂಲಗಳು ಇರುವುದಿಲ್ಲ. ಹೀಗಾಗಿ ಅವರವರೇ ಐಟಿಆರ್‌ ಸಲ್ಲಿಸುವುದು ಉತ್ತಮ.

ಐಟಿಆರ್‌ ಸಲ್ಲಿಸುವುದಕ್ಕಿಂತ ಮುನ್ನ:

ಐಟಿಆರ್‌ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವುದಕ್ಕಿಂತ ಮುನ್ನ ಕೆಲವು ದಾಖಲಾತಿಗಳನ್ನು ಇಟ್ಟುಕೊಳ್ಳಿ. form 26AS ಮತ್ತು AIS ಒಟ್ಟಾರೆ ಆದಾಯ ಮತ್ತು ಐಟಿ ಇಲಾಖೆ ಬಳಿ ಇರುವ ಟ್ಯಾಕ್ಸ್‌ ಕ್ರೆಡಿಟ್‌ ಮಾಹಿತಿ ನೀಡುತ್ತದೆ. ಐಟಿಆರ್‌ ಅಡಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಒಳ್ಳೆಯದು. ಅಗತ್ಯ ಇರುವ ದಾಖಲೆಗಳು ಇಂತಿವೆ.

Form 16 ಮತ್ತು form 26AS : ಈ ಅರ್ಜಿಗಳಲ್ಲಿ ಟಿಡಿಎಸ್/ಟಿಸಿಎಸ್‌ ವಿವರಗಳಿದ್ದು, ದೃಢಪಡಿಸಬೇಕು. ಯಾವುದಾದರೂ ಡಿಡಕ್ಷನ್‌ ಮಿಸ್‌ ಆಗಿದ್ದರೆ ನೀವು ಕ್ಲೇಮ್‌ ಮಾಡಿಕೊಳ್ಳಬಹುದು. ಆದರೆ ಪೂರಕ ದಾಖಲೆಗಳನ್ನು ಒದಗಿಸಬೇಕು. ಹೆಚ್ಚುವರಿ ತೆರಿಗೆ ನೀಡಿದ್ದರೆ ರಿಫಂಡ್‌ ಪಡೆಯಲು ನೀವು ಅರ್ಹರಾಗಿರುತ್ತೀರಿ.

ಬ್ಯಾಂಕ್‌ ಖಾತೆಯ ವಿವರಗಳನ್ನು ಹೊಂದಿರಿ. 2022-23ರಲ್ಲಿ ಬ್ಯಾಂಕ್‌ ಸೇವಿಂಗ್ಸ್‌ ಮೂಲಕ ಗಳಿಸಿದ ಆದಾಯ ವಿವರ ಗಮನಿಸಿ. ಎಫ್‌ಡಿ, ಪೋಸ್ಟ್‌ ಆಫೀಸ್‌ ಸ್ಕೀಮ್‌ ಮೂಲಕ ಗಳಿಸಿದ್‌ ಬಡ್ಡಿ ಬಗ್ಗೆ ವಿವರ ಇರಲಿ. ಮ್ಯೂಚುವಲ್‌ ಫಂಡ್‌, ಬಾಂಡ್‌, ಡಿಬೆಂಚರ್‌ ದಾಖಲಾತಿ ಇರಲಿ. ಸೆಕ್ಷನ್‌ 80 ಸಿ, 80ಜಿಜಿಎ ಅಡಿ ಡೊನೇಶನ್‌ನ ದಾಖಲಾತಿ ಇರಲಿ. ಹೋಮ್‌ ಲೋನ್‌ ಇಂಟರೆಸ್ಟ್‌ ಸರ್ಟಿಫಿಕೇಟ್‌ ಇರಲಿ. ರೆಂಟ್‌ ರಿಸಿಪ್ಟ್‌ ಇಟ್ಟುಕೊಳ್ಳಿ. ಎಲ್ಲ ದಾಖಲಾತಿಗಳು ಇದ್ದರೆ 10-20 ನಿಮಿಷಗಳಲ್ಲಿ ಐಟಿಆರ್‌ ಫೈಲಿಂಗ್‌ ಮಾಡಬಹುದು.

ಇದನ್ನೂ ಓದಿ: Vistara Money Plus : ಮಕ್ಕಳಿಗೆ ಕ್ರೆಡಿಟ್‌ ಕಾರ್ಡ್‌ ಕೊಡುವಾಗ ಇರಲಿ ಎಚ್ಚರ, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್‌ ವಿಡಿಯೊ

Step 1: ಆದಾಯ ತೆರಿಗೆ ಇಲಾಖೆಯ ವೆಬ್‌ ಪೋರ್ಟಲ್‌ ತೆರೆದು ಲಾಗಿನ್‌ ಆಗಿ (https://www.incometax.gov.in/iec/foportal/)

step 2: e-file ಮೆನುವಿಗೆ ಹೋಗಿ Income Tax Return ಲಿಂಕ್‌ ಮೇಲೆ ಕ್ಲಿಕ್ಕಿಸಿ. assessment year , ITR Form number, Tax regime, filing type, original/revised return, submission mode ಹಂತಗಳನ್ನು ಪೂರ್ಣಗೊಳಿಸಿ. ಎಲ್ಲ ವಿವರಗಳನ್ನು ನೀಡಿದ ಬಳಿಕ continue ಕ್ಲಿಕ್‌ ಮಾಡಿ.

step 3 : ಸಲ್ಲಿಸಿದ ಎಲ್ಲ ವಿವರಗಳನ್ನು ಮತ್ತೊಮ್ಮೆ ಓದಿಕೊಳ್ಳಿ. ನೀವು save draft ಅನ್ನೂ ಕ್ಲಿಕ್ಕಿಸಿರಬಹುದು. ಡೇಟಾ ನಷ್ಟ ಆಗದಂತೆ ನೋಡಿಕೊಳ್ಳಲಿ ಇದು ಸಹಕಾರಿ. ಸೇವ್‌ ಮಾಡಿದ ದಿನದಿಂದ 30 ದಿನಗಳ ತನಕ ಡ್ರಾಪ್ಟ್‌ ಸಿಗುತ್ತದೆ.

step 4: ಇ-ಫೈಲಿಂಗ್‌ ಪೋರ್ಟಲ್‌ ಪ್ರೊ-ಫಿಲ್ಡ್‌ ಡಿಟೇಲ್ಸ್‌ ನೀಡುತ್ತದೆ. ಬ್ಯಾಂಕ್‌ ಅಕೌಂಟ್‌, ಕರೆಸ್ಮಾಂಡೆನ್ಸ್‌ ವಿಳಾಸ ಇತ್ಯಾದಿ. ನಿಮ್ಮ ಫಾರ್ಮ್‌ 16/ ಫಾರ್ಮ್‌ 26AS ಆಧರಿಸಿ ಕೊಡುತ್ತದೆ. ಈ ವಿವರಗಳನ್ನು ನೀವು ದೃಢಪಡಿಸಬೇಕಾಗುತ್ತದೆ.

step 5: ವಿವರಗಳನ್ನು ದೃಢಪಡಿಸಿದ ಬಳಿಕ continue ಮೇಲೆ ಕ್ಲಿಕ್‌ ಮಾಡಿ. ಡ್ರಾಫ್ಟ್‌ ಐಟಿಆರ್‌ ಚೆಕ್‌ ಮಾಡಿ.

step 6: TAX Paid ಮತ್ತು verification tab ಆಯ್ಕೆ ಮಾಡಿಕೊಳ್ಳಿ. ಆಧಾರ್‌ ಒಟಿಪಿ ಪ್ರಕ್ರಿಯೆ ಪೂರ್ಣಗೊಳಿಸಿ.

ಐಟಿಆರ್‌ ಸಲ್ಲಿಸಿದ ಬಳಿಕ successful verification ಮೆಸೇಜ್‌ ಅನ್ನು ಐಟಿ ಇಲಾಖೆ ಕಳಿಸುತ್ತದೆ. ಇದರೊಂದಿಗೆ ಐಟಿಆರ್‌ ಪ್ರೊಸೆಸಿಂಗ್‌ಗೆ ಹೋಗುತ್ತದೆ. ಇದು 15-20 ದಿನ ತೆಗೆದುಕೊಳ್ಳುತ್ತದೆ. ಬಳಿಕ ಐಟಿ ಇಲಾಖೆ ವೆಬ್‌ ಸೈಟ್‌ನಲ್ಲಿ ಸ್ಟೇಟಸ್‌ ಚೆಕ್‌ ಮಾಡಬಹುದು. ಐಟಿಆರ್‌ ಸಲ್ಲಿಕೆಗೆ ಜುಲೈ 31 ಕೊನೆ ದಿನಾಂಕ.

Exit mobile version