Site icon Vistara News

ITR Filing : ವಿಳಂಬಿತ ಐಟಿಆರ್‌ ಫೈಲಿಂಗ್‌ಗೆ ಕೊನೆಯ ದಿನ ಯಾವಾಗ?

tax

ITR

ನೀವು 2022-23ರ ಸಾಲಿನ ಐಟಿ ರಿಟರ್ನ್‌ ಅನ್ನು 2023ರ ಜುಲೈ 31ರೊಳಗೆ ಫೈಲಿಂಗ್‌ ಮಾಡುವಲ್ಲಿ ವಿಫಲರಾಗಿದ್ದರೆ, (Income tax return-ITR) ಮುಂದೇನು ಎಂದು ಚಿಂತಿಸುತ್ತಿದ್ದೀರಾ? ಯೋಚಿಸದಿರಿ. ಈಗಲೂ ನೀವು ಐಟಿಆರ್‌ ಫೈಲ್‌ ಮಾಡಬಹುದು. ಪ್ರತಿ ವರ್ಷ ಡಿಸೆಂಬರ್‌ 31 ವಿಳಂಬಿತ ಐಟಿಆರ್‌ ಫೈಲಿಂಗ್‌ಗೆ ಕೊನೆ ದಿನವಾಗಿದೆ. ಹೀಗಾಗಿ ನೀವು 2023ರ ಡಿಸೆಂಬರ್‌ 31 ತನಕ ವಿಳಂಬಿತ ಐಟಿಆರ್‌ (belated ITR ) ಸಲ್ಲಿಸಬಹುದು.

ಏನಿದು ವಿಳಂಬಿತ ರಿಟರ್ನ್?‌ (belated return) : ಐಟಿ ರಿಟರ್ನ್‌ ಸಲ್ಲಿಕೆಯ ಮೂಲ ಗಡುವು ಮುಗಿದ ಬಳಿಕ ಐಟಿಆರ್‌ ಸಲ್ಲಿಕೆಗೆ ನೀಡುವ ಕಾಲಾವಕಾಶವನ್ನು ವಿಳಂಬಿತ ರಿಟರ್ನ್‌ ಎನ್ನುತ್ತಾರೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 139(4) ಅಡಿಯಲ್ಲಿ ಈ ಸೌಲಭ್ಯವಿದೆ.

ಬಿಲೇಟೆಡ್‌ ಐಟಿಆರ್‌ ಫೈಲ್‌ ಮಾಡೋದು ಹೇಗೆ? (How to file belated ITR) : ವಿಳಂಬಿತ ಐಟಿಆರ್‌ ಅನ್ನು ಕೂಡ ನಿಗದಿತ ಡೆಡ್‌ಲೈನ್‌ ಒಳಗೆಯೇ ಫೈಲ್‌ ಮಾಡಬೇಕು. ಆದರೆ ಬಿಲೇಟೆಡ್‌ ಐಟಿಆರ್‌ ಸಲ್ಲಿಸುವಾಗ ಐಟಿಆರ್‌ ಫಾರ್ಮ್‌ನಲ್ಲಿ 139(1) ಬದಲಿಗೆ 139(4) ಆಯ್ಕೆ ಮಾಡಿಕೊಳ್ಳಬೇಕು. 2023 ಜುಲೈ 31ರೊಳಗೆ ಆಗಿದ್ದರೆ 139(1) ಬಳಸಬಹುದಿತ್ತು.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ವಿಳಂಬಿತ ಐಟಿಆರ್‌ ಕುರಿತ ದಂಡ ಯಾವುದು? ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 234 ಎಫ್‌ ಪ್ರಕಾರ ವಿಳಂಬಿತ ಐಟಿ ರಿಟರ್ನ್‌ಗೆ 5,000 ರೂ. ತನಕ ಪೆನಾಲ್ಟಿ ಅನ್ವಯಿಸುತ್ತದೆ. ಹೀಗಿದ್ದರೂ, ತೆರಿಗೆಗೆ ಅರ್ಹ ಆದಾಯ 5 ಲಕ್ಷ ರೂ. ಒಳಗೆ ಇದ್ದರೆ 1000 ರೂ. ದಂಡ ಅನ್ವಯವಾಗುತ್ತದೆ. ಐದು ಸಾವಿರ ಕೊಡಬೇಕಿಲ್ಲ. ನಿಮ್ಮ ಆದಾಯವು ತೆರಿಗೆ ವಿನಾಯಿತಿ ಮಿತಿಯ ಒಳಗಿದ್ದರೂ, ಪೆನಾಲ್ಟಿ ಇರುವುದಿಲ್ಲ. ಆದರೆ ಐಟಿ ರಿಟರ್ನ್‌ ಕಡ್ಡಾಯವಾಗಿದ್ದೂ ಸಲ್ಲಿಸದಿದ್ದರೆ ಪೆನಾಲ್ಟಿ ಆಗುತ್ತದೆ.

ತೆರಿಗೆ ಬಾಕಿ ಮೇಲೆ ಬಡ್ಡಿ: ವಿಳಂಬಿತ ಐಟಿಆರ್‌ ಸಲ್ಲಿಕೆ ವೇಳೆ ನೀವು ಯಾವುದಾದರೂ ತೆರಿಗೆ ಬಾಕಿ ಉಳಿಸಿದ್ದರೆ ಅದಕ್ಕೆ ಬಡ್ಡಿ ದರ ಅನ್ವಯವಾಗುತ್ತದೆ. ತಿಂಗಳಿಗೆ 1% ಲೆಕ್ಕದಲ್ಲಿ ಕೊಡಬೇಕಾಗುತ್ತದೆ. ದಂಡ ಮಾತ್ರವಲ್ಲದೆ ಕೆಲವು ಬೆನಿಫಿಟ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

Exit mobile version