ನವ ದೆಹಲಿ: ಜಾಗ್ವಾರ್ ಲ್ಯಾಂಡ್ ರೋವರ್ (Jaguar Land Rover) ಸಿಇಒ ಥೈರಿ ಬೊಲೋರ್ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. 2022ರ ಡಿಸೆಂಬರ್ 31ಕ್ಕೆ ಅವರು ಕಂಪನಿಯಿಂದ ನಿರ್ಗಮಿಸಲಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಜಾಗ್ವಾರ್ ಲ್ಯಾಂಡದ ರೋವರ್‌ನಲ್ಲಿ ನಡೆಸಿರುವ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಕಂಪನಿ ಲಾಭದ ಹಳಿಗೆ ಮರಳಿದೆ ಎಂದು ಅವರು ಹೇಳಿದ್ದಾರೆ. ಕಂಪನಿ ಈಗ ಟಾಟಾ ಸಮೂಹದ ಭಾಗವಾಗಿದೆ. ಅಡ್ರಿಯನ್ ಮಾರ್ಡೆಲ್ ಹಂಗಾಮಿ ಸಿಇಒ ಆಗಿ ನೇಮಕವಾಗಿದ್ದಾರೆ.
ಜಾಗ್ವಾರ್ ಐಷಾರಾಮಿ ಕಾರುಗಳನ್ನು ಉತ್ಪಾದಿಸುತ್ತದೆ. ಬ್ರಿಟನ್‌ನ ವೈಟ್ಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 39,787 ಉದ್ಯೋಗಿಗಳನ್ನು ಒಳಗೊಂಡಿದೆ. ೨೦೦೮ರಲ್ಲಿ ಟಾಟಾ ಸಮೂಹವು ಈ ಕಂಪನಿಯನ್ನು ಖರೀದಿಸಿತ್ತು.